ಬುಧವಾರ, ಏಪ್ರಿಲ್ 21, 2021
23 °C

₹ 500 ಕೋಟಿ ಮೌಲ್ಯದ ಸರ್ಕಾರಿ ಭೂಮಿ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ತಾಲ್ಲೂಕಿನ ಚೊಕ್ಕನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮಾರಾಟ ಮಾಡಿದ್ದ ಗೋಮಾಳ ಜಮೀನನ್ನು ಮತ್ತೆ ಸರ್ಕಾರದ ಸುಪರ್ದಿಗೆ ಪಡೆದಿರುವ ತಾಲ್ಲೂಕು ಆಡಳಿತ, ₹500 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ.

ಗ್ರಾಮದ ಸರ್ವೆ ನಂ.75/4ರಲ್ಲಿ 21 ಎಕರೆ 19 ಗುಂಟೆ ಜಾಗವು ಸರ್ಕಾರಿ ಗೋಮಾಳ ಜಮೀನು ಎಂದು ದಾಖಲೆಗಳಲ್ಲಿ ಬರುತ್ತಿದ್ದರೂ ಈ ಪೈಕಿ 11 ಎಕರೆ ಜಾಗವನ್ನು ಮುನಿರಾಜು ರೆಡ್ಡಿ ಬಿನ್ ಲೇಟ್ ರಾಮರೆಡ್ಡಿ, ಪದ್ಮಮ್ಮ ಕೋಂ ಮುನಿರಾಜು ರೆಡ್ಡಿ, ಎಂ.ಪ್ರೇಮಾ ಬಿನ್ ಲೇಟ್ ಮುನಿರಾಜು ರೆಡ್ಡಿ, ರಘು ಎಂ. ಬಿನ್ ಮುನಿರಾಜು ರೆಡ್ಡಿ, ನರಸಿಂಹ ರೆಡ್ಡಿ ಬಿನ್ ಮುನಿರಾಜು ರೆಡ್ಡಿ ಎಂಬುವರು ಆಂಧ್ರ ಮೂಲಕ ಚಿತ್ತೂರ ವೆಂಕಟೇಶ್ವರ ಬಿನ್ ರಾಚಯ್ಯ ಎಂಬುವರಿಗೆ ಇದೇ ಜನವರಿ 6ರಂದು ಅಕ್ರಮವಾಗಿ ಗಾಂಧಿನಗರದ (ಕಾಚರಕನಹಳ್ಳಿ) ಹಿರಿಯ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕ್ರಯಪತ್ರ ಮಾಡಿಕೊಟ್ಟಿದ್ದಾರೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ತಿಳಿಸಿದರು.

ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಾರಲು ಮತ್ತು ಖರೀದಿಸಲು ಯತ್ನಿಸಿರುವ ವ್ಯಕ್ತಿಗಳು ಹಾಗೂ ಇದಕ್ಕೆ ಸಹಕರಿಸಿರುವ ಉಪನೋಂದಣಾಧಿಕಾರಿಗಳ ವಿರುದ್ಧ ಕರ್ನಾಟಕ ಭೂಕಂದಾಯ ಕಾಯ್ದೆ ಪ್ರಕಾರ ಕಾನೂನುಕ್ರಮ ಜರುಗಿಸಬೇಕು ಎಂದು ಸಂಪಿಗೇಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು