ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನಗಳ ಮೇಲೆ ಸರ್ಕಾರದ ಲಾಂಛನ, ಅನಧಿಕೃತ ಫಲಕ ತೆರವು

Last Updated 26 ಮೇ 2022, 20:17 IST
ಅಕ್ಷರ ಗಾತ್ರ

ಬೆಂಗಳೂರು: ವಾಹನಗಳ ಮೇಲೆ ಸರ್ಕಾರದ ಲಾಂಛನ ಮತ್ತು ಅನಧಿಕೃತ ಫಲಕ ಬಳಕೆ ವಿರುದ್ಧ ಸಾರಿಗೆ ಇಲಾಖೆ ಗುರುವಾರ ಕಾರ್ಯಾಚರಣೆ ನಡೆಸಿ, 91 ವಾಹನಗಳ ಮೇಲಿದ್ದ ಫಲಕ ತೆರವುಗೊಳಿಸಿತು.

‘ನಿಗಮ–ಮಂಡಳಿಗಳ ವಾಹನಗಳ ಮೇಲೆ ಸರ್ಕಾರದ ಲಾಂಛನ ಮತ್ತು ಖಾಸಗಿ ವಾಹನಗಳ ಮೇಲೆ ಅನಧಿಕೃತ ಫಲಕ ಇರಬಾರದು. ತೆರವುಗೊಳಿಸಲು ವಿಫಲವಾದರೆ ನ್ಯಾಯಾಂಗ ನಿಂದನಾ ಕ್ರಮ ಜರುಗಿಸಲಾಗುವುದು’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.

ಗುರುವಾರ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದಸಾರಿಗೆ ಇಲಾಖೆ ಬೆಂಗಳೂರು ನಗರ ಜಂಟಿ ಆಯುಕ್ತ ಕೆ.ಟಿ. ಹಾಲಸ್ವಾಮಿ ನೇತೃತ್ವದ ತಂಡ, ವಿಧಾನಸೌಧದ ಆಜುಬಾಜಿನಲ್ಲಿ ವಾಹನಗಳನ್ನು ಅಡ್ಡಗಟ್ಟಿ ಅನಧಿಕೃತ ಫಲಕ ತೆರವುಗೊಳಿಸಿತು. ವಾಹನಗಳ ಮಾಲೀಕರಿಗೆ ದಂಡವನ್ನೂ ಅಧಿಕಾರಿಗಳು ವಿಧಿಸಿದರು.

‘ಬೆಂಗಳೂರು ಕೇಂದ್ರ, ಪಶ್ಚಿಮ, ಉತ್ತರ, ದಕ್ಷಿಣ, ಎಲೆಕ್ಟ್ರಾನಿಕ್ ಸಿಟಿ, ಕೆ.ಆರ್.ಪುರ ಸಾರಿಗೆ ಕಚೇರಿಗಳಿಂದಲೂ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಲಾಯಿತು. ಅನಧಿಕೃತ ನಂಬರ್ ಪ್ಲೇಟ್ ಅಳವಡಿಕೆಯಾಗಿದ್ದ 29 ಮತ್ತು ಇತರೆ ಫಲಕಗಳನ್ನು ಹಾಕಿಕೊಂಡಿದ್ದ 62 ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಯಿತು’ ಎಂದು ಕೆ.ಟಿ.ಹಾಲಸ್ವಾಮಿ ‘ಪ್ರಜಾವಾಣಿ’ಗೆ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT