ಬುಧವಾರ, ಆಗಸ್ಟ್ 10, 2022
24 °C

ಮತಕ್ಕಾಗಿ ಓಲೈಕೆ: ಡಾಬಾಗಳಲ್ಲಿ ಬಾಡೂಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಬಸ್ ಪೇಟೆ: ಯುವ ಮತದಾರರನ್ನು ಸೆಳೆಯಲು ಗ್ರಾಮ ಪಂಚಾಯಿತಿ ಚುನಾವಣೆ ಅಭ್ಯರ್ಥಿಗಳು ಡಾಬಾಗಳಲ್ಲಿ ಬಾಡೂಟ ಮಾಡಿಸುತ್ತಿದ್ದಾರಲ್ಲದೆ, ಮನೆಗಳಲ್ಲಿ ಔತಣಕೂಟಗಳನ್ನು ಏರ್ಪಡಿಸುತ್ತಿದ್ದಾರೆ.

ಮಧ್ಯಾಹ್ನ ಖಾಲಿಯೇ ಇರುತ್ತಿದ್ದ ದಾಬಸ್ ಪೇಟೆ ಸುತ್ತಮುತ್ತ ಇರುವ ಡಾಬಾಗಳು ಮಧ್ಯಾಹ್ನವೇ ಭರ್ತಿಯಾಗುತ್ತಿವೆ. ಸಂಜೆಯಾಗುತ್ತಲೇ ರಂಗೇರುತ್ತಿವೆ. ಇನ್ನು ಕೆಲವರು ಕಾರು ಮಾಡಿಕೊಂಡು ಯುವಕರು ಜೊತೆಗೆ ಮಧ್ಯ ವಯಸ್ಕರನ್ನೂ ಕರೆದುಕೊಂಡು ಡಾಬಾಗಳಿಗೆ ಹೋಗುತ್ತಿದ್ದಾರೆ.

ಕೋಳಿಗಳಿಗೆ ಹೆಚ್ಚಿದ ಬೇಡಿಕೆ:

ಮಾಂಸ ತಿನ್ನುವವರ ಮನೆಗಳಿಗೆ ಕೋಳಿಗಳನ್ನು ಕೂಡ ಅಭ್ಯರ್ಥಿಗಳು ನೀಡುತ್ತಿದ್ದಾರೆ. ಇದರಿಂದ ಕೋಳಿಗಳಿಗೆ ಬೇಡಿಕೆ ಹೆಚ್ಚಿದೆ. ಕೆಲವು ಅಭ್ಯರ್ಥಿಗಳು ಮದ್ಯವನ್ನು ಕೂಡ ಹಂಚುತ್ತಿದ್ದಾರೆ ಹೆಸರು ಬಹಿರಂಗಪಡಿಸಲು ಬಯಸದ ಮತದಾರರೊಬ್ಬರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು