ಬೆಂಗಳೂರು: ಮೊಮ್ಮಗಳ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ್ದ ಅಜ್ಜನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ನಗರದ ತ್ವರಿತ ವಿಶೇಷ ನ್ಯಾಯಾಲಯ (ಎಫ್‌ಟಿಎಸ್‌ಸಿ) ಆದೇಶ ಹೊರಡಿಸಿದೆ.

ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಕೆ.ಎಸ್. ರೂಪಾ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ ವಾದಿಸಿದ್ದರು.

‘ಪೋಷಕರ ಜೊತೆಯಲ್ಲಿ ಬಾಲಕಿ ವಾಸವಿದ್ದಳು. ಅವರ ಜೊತೆಯಲ್ಲೇ ಅಪರಾಧಿ ಸಹ ನೆಲೆಸಿದ್ದ. ನಿತ್ಯವೂ ಪೋಷಕರು ಕೆಲಸಕ್ಕೆಂದು ಹೊರಗೆ ಹೋಗುತ್ತಿದ್ದರು. ಅವರು ಬರುವವರೆಗೂ ಬಾಲಕಿ ಹಾಗೂ ಅಜ್ಜ ಮಾತ್ರ ಮನೆಯಲ್ಲಿರುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘70 ವರ್ಷದ ಅಪರಾಧಿ, ಅಶ್ಲೀಲ ವಿಡಿಯೊಗಳನ್ನು ಹೆಚ್ಚಾಗಿ ನೋಡುತ್ತಿದ್ದ. ನಿತ್ಯವೂ ಶಾಲೆಗೆ ಹೋಗಿ ಬರುತ್ತಿದ್ದ ಮೊಮ್ಮಗಳನ್ನು ಆಟವಾಡಿಸುವ ನೆಪದಲ್ಲಿ ಮೈ–ಕೈ ಮುಟ್ಟಿ ದೌರ್ಜನ್ಯ ಎಸಗುತ್ತಿದ್ದ. 3ನೇ ತರಗತಿಯಿಂದ 8ನೇ ತರಗತಿಯವರೆಗೂ ಬಾಲಕಿ ಮೇಲೆ ದೌರ್ಜನ್ಯ ಮುಂದುವರಿಸಿದ್ದ.’

‘ಬಾಲಕಿಗೂ ಅಶ್ಲೀಲ ವಿಡಿಯೊ ತೋರಿಸುತ್ತಿದ್ದ ಆರೋಪಿ, ಲೈಂಗಿಕವಾಗಿ ಪ್ರಚೋದಿಸುತ್ತಿದ್ದ. ಐದು ವರ್ಷಗಳಲ್ಲಿ ಹಲವು ಬಾರಿ ಬಾಲಕಿ ಮೇಲೆ ಅಪರಾಧಿ ಅತ್ಯಾಚಾರವೆಸಗಿದ್ದ’ ಎಂದು ಮೂಲಗಳು ತಿಳಿಸಿವೆ.

ತಂದೆಯನ್ನು ಕೊಲ್ಲುವ ಬೆದರಿಕೆ: ‘ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮೊಮ್ಮಗಳ ಜೊತೆ ಅಜ್ಜ ಅಸಭ್ಯವಾಗಿ ವರ್ತಿಸುತ್ತಿದ್ದ. ಈತನ ವರ್ತನೆಯಿಂದ ಬೇಸತ್ತ ಬಾಲಕಿ, ತಂದೆಗೆ ವಿಷಯ ತಿಳಿಸುವುದಾಗಿ ಹೇಳಿದ್ದಳು. ಬಾಲಕಿಯನ್ನೇ ಹೆದರಿಸಿದ್ದ ಅಪರಾಧಿ, ತಂದೆಯನ್ನೇ ಕೊಲೆ ಮಾಡುವುದಾಗಿ ಬೆದರಿಸಿದ್ದ. 2020ರಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ, ತನ್ನ ಮೇಲೆ ಅಜ್ಜ ಎಸಗುತ್ತಿದ್ದ ಕೃತ್ಯದ ಬಗ್ಗೆ ಪೋಷಕರಿಗೆ ವಿಷಯ ತಿಳಿಸಿದ್ದಳು. ಬಳಿಕವೇ ಪೋಷಕರು ಕುಮಾರಸ್ವಾಮಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದ ತನಿಖಾಧಿಕಾರಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದು ’ ಎಂದು ಪೊಲೀಸ್ ಮೂಲಗಳು ಹೇಳಿವೆ.

₹ 7 ಲಕ್ಷ ಪರಿಹಾರ: ‘ನೊಂದ ಬಾಲಕಿಗೆ ಡಿಎಲ್‌ಎಸ್‌ಎ ವತಿಯಿಂದ ₹ 7 ಲಕ್ಷ ಪರಿಹಾರ ನೀಡಬೇಕು’ ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.