ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

Greater Bengaluru | ಜಿಬಿಎ ರಚನೆ ನಂತರ ಮುಂದೇನಾಗಬೇಕು?: ಜನಾಭಿಪ್ರಾಯ

Published : 19 ಮೇ 2025, 23:30 IST
Last Updated : 19 ಮೇ 2025, 23:30 IST
ಫಾಲೋ ಮಾಡಿ
Comments
ರಾಜಧಾನಿ ಬೆಂಗಳೂರಿನ ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಜಿಬಿಎಯಿಂದ ಸಾಧ್ಯವಾಗಲಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. ಇವರು ನಗರದ ಅಕ್ಕಪಕ್ಕದ ಪ್ರದೇಶಗಳಾದ ಬಿಡದಿ, ಆನೇಕಲ್‌ಗಳಲ್ಲಿ ವಾಸಿಸುತ್ತಿದ್ದರು. ಈಗ ಜಿಬಿಎ ವ್ಯಾಪ್ತಿ ಈ ಪ್ರದೇಶಗಳನ್ನು ಒಳಗೊಳ್ಳುವುದರಿಂದ ಬಡ ವಲಸಿಗರಿಗೂ ತೆರಿಗೆಯ ಬರೆ ಬೀಳುವ ಸಾಧ್ಯತೆ ಇದೆ. ಜಿಬಿಎ ಸಾಧಕ–ಬಾಧಕಗಳನ್ನು ಸಾರ್ವಜನಿಕವಾಗಿ ಚರ್ಚಿಸಿ ನಂತರ ಅದನ್ನು ಅನುಷ್ಠಾನಗೊಳಿಸಬೇಕು.
– ಕಿರಣ್ ಮೌರ್ಯ, ಅತ್ತಿಗುಪ್ಪೆ
ಬೆಂಗಳೂರು ನಗರ ಪಾಲಿಕೆಯಿಂದ ಮಹಾನಗರ ಪಾಲಿಕೆಯಾಯಿತು. ನಂತರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಗಿ, ಈಗ ಜಿಬಿಎ ಆಗುತ್ತಿದೆ. ಬೆಂಗಳೂರಿನ ರಸ್ತೆಗಳು ಮಳೆ ಬಂದರೆ ಕೆರೆಗಳಾಗಿ ಮಾರ್ಪಡುತ್ತಿವೆ. ರಸ್ತೆ ಗುಂಡಿ, ಸಂಚಾರ ದಟ್ಟಣೆ ಸೇರಿದಂತೆ ಮೂಲಸೌಲಭ್ಯ ಅಭಿವೃದ್ಧಿಗೆ ಗ್ಯಾರಂಟಿ ನೀಡಿದ ನಂತರ, ಹೆಸರು ಬದಲಾವಣೆಗೆ ಆದ್ಯತೆ ನೀಡಬೇಕು.
– ಪತ್ತಂಗಿ ಎಸ್. ಮುರಳಿ, ಕುಮಾರಸ್ವಾಮಿ ಬಡಾವಣೆ
ಕ್ಷೇತ್ರಗಳು ಪುನರ್‌ ವಿಂಗಡಣೆ ಆದ ನಂತರ ಜಿಬಿಎ ಮಾಡಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು. ಈಗಲೇ ಜಿಬಿಎ ಅನುಷ್ಠಾನ ಮಾಡಿದರೆ, ಮತ್ತೆ 2028–29ರಲ್ಲಿ ಕ್ಷೇತ್ರ ವಿಂಗಡನೆ ಸಮಯದಲ್ಲಿ ವಾರ್ಡ್‌ಗಳು ಮತ್ತು ಬೇರೆ–ಬೇರೆ ಕ್ಷೇತ್ರಗಳಲ್ಲಿ ಹರಿದು ಹಂಚಿ ಹೋಗಲಿದೆ. ಇದರಿಂದ ಚುನಾಯಿತ ಪ್ರತಿನಿಧಿಗಳು ಕ್ಷೇತ್ರ ಹಾಗೂ ವಾರ್ಡ್‌ಗಳ ಅಭಿವೃದ್ಧಿ ಮಾಡುವ ಬಗ್ಗೆ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ಬೆಂಗಳೂರು ಅಭಿವೃದ್ಧಿಗೆ ಹಿನ್ನಡೆ ಆಗಲಿದೆ.
– ಪಿ.ಎಸ್. ಪ್ರಕಾಶ್, ಅರಳೆಪೇಟೆ
ಬಿಬಿಎಂಪಿ ಹೋಗಿ ಜಿಬಿಎ ಎಂಬ ಹೆಸರು ಬದಲಾದರೆ ಅಷ್ಟೇ ಸಾಲದು, ಮೂಲ ಬೆಂಗಳೂರಿನ ಸೊಗಡನ್ನು ಉಳಿಸಿಕೊಳ್ಳಬೇಕು. ನಗರದ ಸ್ವಚ್ಛತೆಗೆ, ಸೌಂದರ್ಯಕ್ಕೆ ಆದ್ಯತೆ ನೀಡಬೇಕು. ರಸ್ತೆ ಗುಂಡಿ ಮುಚ್ಚುವುದು, ಗುಣಮಟ್ಟದ ರಸ್ತೆ, ಪಾದಚಾರಿ ಮಾರ್ಗಗಳನ್ನು ನಿರ್ಮಿಸಬೇಕು. ಉದ್ಯಾನಗಳ ಸೊಬಗನ್ನು ಹೆಚ್ಚಿಸಬೇಕು. ಕಸದ ಸಮಸ್ಯೆಗೆ ಮುಕ್ತಿ ನೀಡಬೇಕು. ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ನಂತರ ಜಿಬಿಎ ಅನುಷ್ಠಾನಗೊಳಿಸಿ, ನಾಡಪ್ರಭು ಕೆಂಪೇಗೌಡರ ಕನಸಿನ ಬೆಂಗಳೂರನ್ನು ಉಳಿಸಿ, ಬೆಳೆಸಬೇಕಿದೆ.
– ಎಂ.ಚಂದ್ರಶೇಖರ್, ಹನುಮಂತನಗರ
ಜಿಬಿಎ ಆಯ್ತು: ಮುಂದೇನಾಗಬೇಕು
‘ಗ್ರೇಟರ್‌ ಬೆಂಗಳೂರು ಪ್ರದೇಶ’ ಘೋಷಣೆಯಾಗಿದೆ. ಮುಂದೆ ಏನಾಗಬೇಕು? ಪ್ರತಿಕ್ರಿಯಿಸಿ. ಮಾಹಿತಿ ಸಂಕ್ಷಿಪ್ತವಾಗಿರಲಿ.ಜೊತೆಗೆ ವಿಳಾಸ, ಭಾವಚಿತ್ರವಿರಲಿ. 9606038256

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT