ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪಾಲ ಆಸ್ಪತ್ರೆಗೆ ಗಿನ್ನೆಸ್‌ ದಾಖಲೆಯ ಮಾನ್ಯತೆ ಪ್ರಮಾಣ ಪತ್ರ

Published 30 ಅಕ್ಟೋಬರ್ 2023, 15:38 IST
Last Updated 30 ಅಕ್ಟೋಬರ್ 2023, 15:38 IST
ಅಕ್ಷರ ಗಾತ್ರ

ಬೆಂಗಳೂರು: ಕಾರ್ಡಿಯೋಪಲ್ಮನರಿ ರಿಸಸಿಟೇಷನ್(ಸಿಪಿಆರ್) ಕಲಿಯುವುದಾಗಿ ಮಣಿಪಾಲ ಆಸ್ಪತ್ರೆಯಲ್ಲಿ (24 ಗಂಟೆಗಳಲ್ಲಿ) ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಕ್ಕಾಗಿ ಆಸ್ಪತ್ರೆಗೆ ಗಿನ್ನೆಸ್‌ ದಾಖಲೆಯ ಪ್ರಮಾಣ ಪತ್ರವನ್ನು ನೀಡಲಾಗಿದೆ.

ಮಣಿಪಾಲ್ ಹಾಸ್ಪಿಟಲ್ಸ್‌ ಚೇರ್ಮನ್ ಡಾ. ಎಚ್. ಸುದರ್ಶನ್ ಬಲ್ಲಾಳ್ ಅವರಿಗೆ ಗಿನ್ನೆಸ್‌ ಪ್ರತಿನಿಧಿ ಈ ಪ್ರಮಾಣ ಪತ್ರವನ್ನು ನೀಡಿದರು.  ಈ ವೇಳೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಇದ್ದರು.

ಹೃದಯ ಮತ್ತು ಶ್ವಾಸಕೋಶಗಳ ಕಾರ್ಯ ಪುನರ್‌ ಸ್ಥಾಪಿಸುವ ಕ್ರಮವನ್ನು (ಸಿಪಿಆರ್) ಕಲಿಯಲು ಸೆ.27 ಮತ್ತು 28ರಂದು 24 ಗಂಟೆಗಳ ಅವಧಿಯಲ್ಲಿ 22 ಸಾವಿರಕ್ಕೂ ಅಧಿಕ ಜನರು ಪ್ರತಿಜ್ಞೆ ಸ್ವೀಕರಿಸಿರುವುದು ದಾಖಲೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT