ಬೆಂಗಳೂರು: ಅಂಚೆ ಇಲಾಖೆಯ ‘ಜ್ಞಾನ ಅಂಚೆ’ (ಗ್ಯಾನ್ ಪೋಸ್ಟ್) ಎಂಬ ಹೆಸರಿನ ಹೊಸ ಅಂಚೆ ಸೇವೆ ಗುರುವಾರ ಪ್ರಾರಂಭಗೊಂಡಿತು.

ನಗರದಲ್ಲಿ ಬೆಂಗಳೂರು ಜಿಪಿಒ, ಆರ್ಟಿ ನಗರ, ಎಚ್ಎಎಲ್ 2ನೇ ಹಂತ, ಜಯನಗರ, ಬಸವನಗುಡಿ, ರಾಜಾಜಿನಗರ, ಜಾಲಹಳ್ಳಿ ಸಹಿತ ವಿವಿಧ ಮುಖ್ಯ ಅಂಚೆ ಕಚೇರಿಗಳಲ್ಲಿ ಈ ಸೇವೆ ಲಭ್ಯವಿದೆ ಎಂದು ಬೆಂಗಳೂರು ಪೂರ್ವ ವಲಯ ಹಿರಿಯ ಅಂಚೆ ಅಧೀಕ್ಷಕ ರಂಜಿತ್ ಕುಮಾರ್ ತಿಳಿಸಿದ್ದಾರೆ.

ಪಠ್ಯಪುಸ್ತಕಗಳು, ಶಾಸ್ತ್ರೀಯ, ಸಾಂಸ್ಕೃತಿಕ, ಧಾರ್ಮಿಕ ಪುಸ್ತಕಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿತ ಪುಸ್ತಕಗಳನ್ನು ಮಾತ್ರ ಈ ಸೇವೆ ಮೂಲಕ ಕಳುಹಿಸಬಹುದು. ನಿಯತಕಾಲಿಕೆಗಳನ್ನು ಹೊರತುಪಡಿಸಿ ಕೇವಲ ಮುದ್ರಿತ ಪುಸ್ತಕಗಳನ್ನು ರವಾನಿಸಲು ಅವಕಾಶವಿದೆ. ಪಾರ್ಸೆಲ್ನ ಹೊರಭಾಗದಲ್ಲಿ ‘ಜ್ಞಾನ್ ಪೋಸ್ಟ್’ ಎಂದು ನಮೂದಿಸಿರಬೇಕು. ಕನಿಷ್ಠ ತೂಕ 300 ಗ್ರಾಂ. ಮತ್ತು ಗರಿಷ್ಟ 5 ಕೆ.ಜಿ.ವರೆಗೂ ಕಳುಹಿಸಬಹುದು. ಸ್ಪೀಡ್ ಪೋಸ್ಟ್ ಮತ್ತು ನೋಂದಾಯಿತ ಅಂಚೆಯಂತೆ ಇದನ್ನೂ ಬುಕ್ ಮಾಡಿದಾಗಿನಿಂದ ವಿಳಾಸಕ್ಕೆ ತಲುಪುವವರೆಗೂ ಆನ್ಲೈನ್ನಲ್ಲಿ ಟ್ರ್ಯಾಕ್ ಮಾಡಬಹುದು.

ಸೇವಾ ಶುಲ್ಕದ ಉಲ್ಲೇಖ: 300 ಗ್ರಾಂ.ವರೆಗೆ ₹20, 301ರಿಂದ 500 ಗ್ರಾಂ.ವರೆಗೆ ₹25, 501ರಿಂದ 1,000 ಗ್ರಾಂ.ವರೆಗೆ ₹35, ಗರಿಷ್ಠ 5,000 ಗ್ರಾಂ.ವರೆಗೆ ₹100 ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.