ಗುರುವಾರ , ಅಕ್ಟೋಬರ್ 1, 2020
27 °C

ಜಿಮ್‌ ಪುನರಾರಂಭ: ಗ್ರಾಹಕರಿಗೆ ಮಾಸ್ಕ್‌ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದ ಜಿಮ್‌ವೊಂದರಲ್ಲಿ ವ್ಯಕ್ತಿಯೊಬ್ಬರು ವ್ಯಾಯಾಮ ಮಾಡಿದರು – ಚಿತ್ರ: ಎಂ.ಎಸ್. ಮಂಜುನಾಥ್

ಬೆಂಗಳೂರು: ಕೇಂದ್ರ ಸರ್ಕಾರವು ಬುಧವಾರದಿಂದ (ಆ.5) ಜಿಮ್‌ ಮತ್ತು ಫಿಟ್‌ನೆಸ್‌ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿದ್ದು, ಸೋಂಕು ತಡೆಗೆ ಈ ಕೇಂದ್ರಗಳಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ. 

ಜಿಮ್‌ ಪ್ರವೇಶಿಸುವಾಗ ಉಷ್ಣಾಂಶ ಪರೀಕ್ಷಿಸಿಕೊಳ್ಳಬೇಕು,ಸ್ಯಾನಿಟೈಸರ್‌ ನಿಂದ ಕೈಗಳನ್ನು ಶುಚಿಗೊಳಿಸಿಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು ಎಂದು ಯುವ ಸಬಲೀಕರಣ ಇಲಾಖೆ ಸೂಚಿಸಿದೆ.

ಜ್ವರ, ಕೆಮ್ಮು, ಶೀತದ ಸಮಸ್ಯೆ ಹೊಂದಿರುವವರಿಗೆ ಪ್ರವೇಶ ನಿರಾಕರಿಸಬೇಕು ಮತ್ತು ಜಿಮ್‌ನಲ್ಲಿ ಶುದ್ಧ ಗಾಳಿ ಬೀಸಲು ವ್ಯವಸ್ಥೆ ಮಾಡಿರಬೇಕು. ಬಳಕೆದಾರರು ಕನಿಷ್ಠ ಆರು ಅಡಿ ಅಂತರ ಕಾಪಾಡಿಕೊಳ್ಳಲು ವ್ಯವಸ್ಥೆ ಮಾಡಿರಬೇಕು ಎಂದು ಹೇಳಿದೆ. 

ಕಂಟೈನ್‌ಮೆಂಟ್‌ ವಲಯದಲ್ಲಿ ಈ ಕೇಂದ್ರಗಳನ್ನು ಸಾರ್ವಜನಿಕ ಪ್ರವೇಶಕ್ಕೆ ತೆರೆಯಲು ಅವಕಾಶವಿಲ್ಲ ಎಂದೂ ಹೇಳಲಾಗಿದ್ದು, ಬಳಕೆದಾರರ ಸಂಪೂರ್ಣ ವಿಳಾಸ, ದೂರವಾಣಿ ಸಂಖ್ಯೆ, ವಯಸ್ಸು ಮತ್ತಿತರ ವಿವರಗಳನ್ನು ದಾಖಲಿಸಿಕೊಳ್ಳಲು ಸೂಚಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು