ಶನಿವಾರ, ಜನವರಿ 18, 2020
26 °C

ಪ್ರಚೋದನಾತ್ಮಕ ಮಾತು ಬಿಡಿ, ಕಾಯ್ದೆ ಮಾಹಿತಿಗೆ ಕೈಪಿಡಿ ಓದಿ: ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತಂತೆ ವಾಸ್ತವ ಸಂಗತಿಗಳನ್ನು ಜನರಿಗೆ ತಿಳಿಸುವ ಸಲುವಾಗಿ ಬಿಜೆಪಿ ವತಿಯಿಂದ ಶನಿವಾರ ಕೈಪಿಡಿ ಬಿಡುಗಡೆ ಮಾಡಲಾಯಿತು.

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಹಿರಿಯ ನಾಯಕ ಸಿ.ಎಂ.ಉದಾಸಿ ಅವರು ಕೈಪಿಡಿ ಬಿಡುಗಡೆ ಮಾಡಿದರು.

ಶಾಸಕ ಯು.ಟಿ.ಖಾದರ್ ಪ್ರಚೋದನಾತ್ಮಕವಾಗಿ ಹೇಳಿಕೆ ನೀಡಿದ್ದಕ್ಕೆ ಸಚಿವರೂ ಪ್ರಚೋದನಾತ್ಮಕವಾಗಿ ಹೇಳಿಕೆ ನೀಡುವುದು ಏಕೆಂದರೆ ಕಾಯ್ದೆಯಲ್ಲಿ ಏನಿದೆ ಎಂದು ತಿಳಿಯದೆ ಇರುವುದಕ್ಕೆ. ಹೀಗಾಗಿ ಕೈಪಿಡಿ ಓದಿಕೊಂಡರೆ ಯಾರೂ ಪ್ರಚೋದನೆ ಮಾತು ಆಡುವುದಕ್ಕೆ ಅಥವಾ ಪ್ರಚೋದನೆಗೆ ಒಳಪಡುವುದಕ್ಕೆ ಸಾಧ್ಯವಿಲ್ಲ ಎಂದರು.

ಇದಕ್ಕೆ ಮೊದಲು ಪಕ್ಷದ ಕಚೇರಿಯಲ್ಲಿ ರಾಜ್ಯದ ವಿವಿಧೆಡೆ ಯಿಂದ ಬಂದ ಪಕ್ಷದ ಕಾರ್ಯ ಕರ್ತರಿಗೆ ಕಾಯ್ದೆ ಬಗ್ಗೆ ಕಾರ್ಯಾಗಾರ ನಡೆಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು