ಮಂಗಳವಾರ, ಜನವರಿ 28, 2020
19 °C

ಕೇರಳದ ವಿಡಿಯೊ ತೋರಿಸಿ ದೇವೇಗೌಡರ ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕೇರಳದಲ್ಲಿ ಕಾರ್ಯಕರ್ತರು ಅದ್ಧೂರಿಯಾಗಿ ಮಾಡಿರುವ ಮೆರವಣಿಗೆಯ ವಿಡಿಯೊವನ್ನು ಶನಿವಾರ ಇಲ್ಲಿ ತೋರಿಸುವ ಮೂಲಕ ಪಾಠ ಮಾಡಿದ ಪ್ರಸಂಗ ನಡೆಯಿತು.

ಪಕ್ಷದ ಕಚೇರಿಯಲ್ಲಿ ಮಹಿಳಾ ಕಾರ್ಯಕರ್ತರಿಗೆ ಸಭೆ ಏರ್ಪಡಿಸಲಾಗಿತ್ತು. ‘ಕೇರಳದ ಕ್ಯಾಲಿಕಟ್‌ನಲ್ಲಿ ನಮ್ಮ ಪಕ್ಷದವರು ಹೇಗೆ ಶಿಸ್ತಿನಿಂದ ಪ್ರತಿಭಟನೆ ಮಾಡುತ್ತಾರೆ ನೋಡಿ, ಅದನ್ನು ತೋರಿಸುವುದಕ್ಕೆ ನಿಮಗೆ ಈ ವಿಡಿಯೊ ತೋರಿಸುತ್ತಿದ್ದೇನೆ. ಮುಂದಿನ ವರ್ಷ ಕೇರಳದಲ್ಲಿ ವಿಧಾನಸಭೆ ಚುನಾವಣೆ ಇದೆ, ಅವರು ಈಗಿನಿಂದಲೇ ಹೇಗೆ ಕೆಲಸ ಮಾಡುತ್ತಿದ್ದಾರೆ ನೋಡಿ’ ಎಂದರು.

‘ಎರಡು ಗ್ರಹಣ ಕಳೆದ ಬಳಿಕ ಇದೇ ಮೊದಲ ಬಾರಿಗೆ ಪಕ್ಷದ ಕಚೇರಿಗೆ ಬರುತ್ತಿದ್ದೇನೆ. ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಹೋಗಿದ್ದೆ, ವಿಶ್ರಾಂತಿ ಪಡೆಯಲು ಹೇಳಿದ್ದರು‘ ಎಂದರು.

‘ನಮಗೆಲ್ಲಾ ಹೆಚ್ಚಿನ ಶಕ್ತಿ ಸಿಗಬೇಕಾದರೆ ದೇವೇಗೌಡರು ರಾಜ್ಯಸಭೆಗೆ ಹೋಗಬೇಕು’ ಎಂದು ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಲೀಲಾದೇವಿ ಆರ್‌.ಪ್ರಸಾದ್‌ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು