ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ನಗರದ ಹಲವೆಡೆ ಬಿರುಸಿನ ಮಳೆ

Published 29 ಆಗಸ್ಟ್ 2024, 16:28 IST
Last Updated 29 ಆಗಸ್ಟ್ 2024, 16:28 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬಹುತೇಕ ಪ್ರದೇಶಗಳಲ್ಲಿ ಗುರುವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಬಿರುಸಿನ ಮಳೆಯಾಯಿತು. ರಸ್ತೆಗಳಲ್ಲಿ ನೀರು ನಿಂತು, ವಾಹನ ಸವಾರರು ಸಂಚರಿಸಲು ಪರದಾಡಿದರು.

ಮಧ್ಯಾಹ್ನ ಆರಂಭವಾದ ಮಳೆ ಸಂಜೆಯವರೆಗೂ ಸುರಿಯಿತು. ನಗರದ 118 ವಾರ್ಡ್‌ಗಳಲ್ಲಿ ಮಳೆಯಾಯಿತು.

ಲೌರಿ ಮೆಮೊರಿಯಲ್‌ ಸ್ಕೂಲ್‌ ಜಂಕ್ಷನ್‌ನಿಂದ ವೈಟ್‌ಫೀಲ್ಡ್‌ ಕಡೆ ರಸ್ತೆ, ಕಮಾಂಡ್‌ ಆಸ್ಪತ್ರೆಯಿಂದ ವಿಮಾನ ನಿಲ್ದಾಣ ರಸ್ತೆ, ಪಣತ್ತೂರು ರೈಲ್ವೆ ಸೇತುವೆಯಿಂದ ವರ್ತೂರು ಮುಖ್ಯರಸ್ತೆ, ಕಾಡುಬೀಸನಹಳ್ಳಿಯಿಂದ ಮಾರತ್‌ಹಳ್ಳಿ, ಕಸ್ತೂರಿನಗರ ವರ್ತುಲ ರಸ್ತೆ, ಬೆಳ್ಳಂದೂರು ಕೋಡಿಯಿಂದ ಸಕ್ರಾ ಆಸ್ಪತ್ರೆ, ಆರ್‌.ಟಿ. ನಗರ, ಜಯಮಹಲ್‌ ಪ್ಯಾಲೇಸ್‌, ಎಂ.ಜಿ. ರಸ್ತೆಯ ಅನಿಲ್‌ ಕುಂಬ್ಳೆ ವೃತ್ತ, ಕಸ್ತೂರಬಾ ರಸ್ತೆ, ಕಂಠೀರವ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆ, ಎಸ್‌ಜೆಪಿ ರಸ್ತೆಯಿಂದ ಟೌನ್‌ಹಾಲ್‌, ಹೆಬ್ಬಾಳ ಜಂಕ್ಷನ್‌ ಸುತ್ತಮುತ್ತಲ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಮೈಸೂರು ರಸ್ತೆ ಮೇಲ್ಸೇತುವೆ, ಸಿರ್ಸಿ ಮೇಲ್ಸೇತುವೆಗಳಲ್ಲಿ ನೀರು ನಿಂತು, ದಟ್ಟಣೆ ಉಂಟಾಯಿತು. ದ್ವಿಚಕ್ರ ವಾಹನ ಸವಾರರು ಪರದಾಡಿದರು.

ಬೆಂಗಳೂರಿನ ಗುರುವಾರ ಸುರಿದ ಬಿರುಸಿನ ಮಳೆಗೆ ಕಬ್ಬನ್ ಉದ್ಯಾನದಲ್ಲಿನ ಸೂರಿನಲ್ಲಿ ರಕ್ಷಣೆ ಪಡೆದ ನಾಗರಿಕರು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಗುರುವಾರ ಸುರಿದ ಬಿರುಸಿನ ಮಳೆಗೆ ಕಬ್ಬನ್ ಉದ್ಯಾನದಲ್ಲಿನ ಸೂರಿನಲ್ಲಿ ರಕ್ಷಣೆ ಪಡೆದ ನಾಗರಿಕರು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ 3.5 ಸೆಂ.ಮೀ, ಮಾರತ್‌ಹಳ್ಳಿಯಲ್ಲಿ 3.3 ಸೆಂ.ಮೀ, ದೊಡ್ಡನೆಕ್ಕುಂದಿಯಲ್ಲಿ 3 ಸೆಂ.ಮೀ, ಕೋನೇನ ಅಗ್ರಹಾರದಲ್ಲಿ 2.8 ಸೆಂ.ಮೀ, ಚಾಮರಾಜಪೇಟೆಯಲ್ಲಿ 2.4 ಸೆಂ.ಮೀ, ಕೋರಮಂಗಲದಲ್ಲಿ 2.2 ಸೆಂ.ಮೀ, ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ 2.1 ಸೆಂ.ಮೀ, ಪುಲಕೇಶಿನಗರ, ಕಾಟನ್‌ಪೇಟೆ, ನಾಗಪುರ, ಎಚ್‌ಎಸ್‌ಆರ್‌ ಲೇಔಟ್‌, ಹಂಪಿನಗರ, ಬಸವೇಶ್ವರನಗರಗಳಲ್ಲಿ ತಲಾ 2  ಸೆಂ.ಮೀ ಮಳೆಯಾಯಿತು.

ರಾಜಭವನದ ರಸ್ತೆಯ ಮಿನ್ಸ್ಕ್ ಸ್ಕ್ವೇರ್ ಬಳಿ ಮಳೆ ನೀರಿನಲ್ಲೇ ಸಾಗಿದ ವಾಹನಗಳು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ರಾಜಭವನದ ರಸ್ತೆಯ ಮಿನ್ಸ್ಕ್ ಸ್ಕ್ವೇರ್ ಬಳಿ ಮಳೆ ನೀರಿನಲ್ಲೇ ಸಾಗಿದ ವಾಹನಗಳು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT