ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನಗರದಲ್ಲಿ ತಡರಾತ್ರಿ ಧಾರಾಕಾರ ಮಳೆ

Published 13 ಮೇ 2024, 16:24 IST
Last Updated 13 ಮೇ 2024, 16:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹಲವೆಡೆ ಭಾನುವಾರ ತಡರಾತ್ರಿ ಧಾರಾಕಾರ ಮಳೆಯಾಗಿದ್ದು, ನಗರದ ವಾತಾವರಣ ಇನ್ನಷ್ಟು ತಂಪಾಯಿತು.

ಬಿಳೇಕಹಳ್ಳಿ, ಸಾರಕ್ಕಿ ಭಾಗದಲ್ಲಿ ಜೋರು ಮಳೆಯಾಗಿದೆ. ಮಳೆಯಿಂದ ಅಂಡರ್‌ ಪಾಸ್ ಹಾಗೂ ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿಯಿತು. ಬಿರುಗಾಳಿಯಿಂದ ಅಲ್ಲಲ್ಲಿ ಮರದ ಕೊಂಬೆಗಳು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಗರದ  ಉತ್ತರ ಭಾಗದ ಪ್ರದೇಶಗಳಲ್ಲಿಯೂ ಜೋರು ಮಳೆಯಾಗಿದೆ.

ಮಳೆ ಪ್ರಮಾಣ: ಬಿಳೇಕಹಳ್ಳಿಯಲ್ಲಿ ಅತಿ ಹೆಚ್ಚು ಅಂದರೆ 5.25 ಸೆಂ.ಮೀ. ಮಳೆಯಾಗಿದೆ. ಸಾರಕ್ಕಿ, ದೊರೆಸಾನಿಪಾಳ್ಯ, ಕೋಣನಕುಂಟೆಗಳಲ್ಲಿ ತಲಾ 4.65 ಸೆಂ.ಮೀ. ಮಳೆ ದಾಖಲಾಗಿದೆ. ಬಿಟಿಎಂ ಲೇಔಟ್‌ (3.7 ಸೆಂ.ಮೀ.), ಬೊಮ್ಮನಹಳ್ಳಿ (3.4 ಸೆಂ.ಮೀ.), ಅರಕೆರೆ (3 ಸೆಂ.ಮೀ.), ಬೇಗೂರು (3 ಸೆಂ.ಮೀ.), ಕೂಡಿಗೆಹಳ್ಳಿ (2.6 ಸೆಂ.ಮೀ.), ರಾಧಾಕೃಷ್ಣನಗರಗಳಲ್ಲಿ (2.6 ಸೆಂ.ಮೀ.) ಉತ್ತಮ ಮಳೆಯಾಗಿದೆ. ಕುಮಾರಸ್ವಾಮಿ ಬಡಾವಣೆ, ಬಸವನಗುಡಿ, ಸಿಂಗಸಂದ್ರ, ವಿಶ್ವನಾಥ ನಾಗೇನಹಳ್ಳಿ, ಕೋರಮಂಗಲ, ವನ್ನಾರ್‌ಪೇಟೆಗಳಲ್ಲಿ 2 ಸೆಂ.ಮೀ.ನಷ್ಟು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT