ಗುರುವಾರ , ಏಪ್ರಿಲ್ 22, 2021
30 °C

ಧ್ವಜ ಹಾರಿಸಿ ಬರ್ಬೇಕು, ಇಲ್ಲ ಮೈ ಮೇಲೆ ಹೊದ್ದು ಬರ್ಬೇಕು: ಮಹಾದೇವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ’ಯುದ್ದ ಭೂಮಿಯಲ್ಲಿ ನಮ್ಮ ರಾಷ್ಟ್ರ ಧ್ವಜವನ್ನು ಹಾರಿಸಬೇಕು. ಇಲ್ಲದಿದ್ದರೆ ಶತ್ರುಗಳ ಜೊತೆ ಹೋರಾಡಿ ವೀರ ಮರಣವನ್ನು ಹೊಂದಿ ಮೈಮೇಲೆ ರಾಷ್ಟ್ರ ಧ್ವಜವನ್ನು ಹೊದ್ದು ಬರಬೇಕು. ಆಗಲೇ ಬದುಕು ಸಾರ್ಥಕ ವಾಗುವುದು‘ ಎಂದು ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ ಅವರ ಪತ್ನಿ ಮಹಾದೇವಿ ಹೇಳಿದರು.

ಬೊಮ್ಮಶೆಟ್ಟಿಹಳ್ಳಿ ಗ್ರಾಮದ ಹಿತ ಚಿಂತನಾ ಟ್ರಸ್ಟ್ ತೋಟಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಸೂರ್ಯ ಲಕ್ಷ
ದೀಪೋತ್ಸವದಲ್ಲಿ ಅವರು ಮಾತನಾಡಿದರು.

’ಪತಿ ಹನುಮಂತಪ್ಪ ಕೊಪ್ಪದ ಅವರು 6 ದಿನಗಳ ಕಾಲ ಸಿಯಾಚಿನ್‍ನ ಹಿಮ ಕುಸಿತ ಪ್ರದೇಶದಲ್ಲಿ ಜೀವನ್ಮರಣದ ಹೋರಾಟ ಮಾಡಿ ವೀರ ಮರಣ ಹೊಂದಿದರು. ಅವರು ತಮ್ಮ ಮೈ ಮೇಲೆ ರಾಷ್ಟ್ರಧ್ವಜ ಹೊದ್ದು ಬಂದರು. ಅವರ ಬಗ್ಗೆ ನನಗೆ ಹೆಮ್ಮೆ ಇದೆ‘ ಎಂದರು. 

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು