ಗುರುವಾರ , ಮೇ 19, 2022
25 °C

ಹುಕ್ಕಾ ಸೇವನೆಗೆ ಪ್ರತ್ಯೇಕ ಜಾಗ ಮೀಸಲಿಡಿ: ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿರುವ ಕಾರಣ ಹುಕ್ಕಾ ಸೇವನೆಯಿಂದ ಇತರೆ ಗ್ರಾಹಕರಿಗೆ ತೊಂದರೆ ಉಂಟು ಮಾಡಬಾರದು. ಆದ್ದರಿಂದ, ಹುಕ್ಕಾ ಸೇವನೆಗೆ ರೆಸ್ಟೋರೆಂಟ್‌ಗಳಲ್ಲಿ ಪರವಾನಗಿ ಪಡೆದ ಪ್ರತ್ಯೇಕ ಜಾಗ ಮೀಸಲಿಡಬೇಕು‘ ಎಂದು ಹೈಕೋರ್ಟ್‌ ಹೇಳಿದೆ.

‘ನಾವು ನ್ಯಾಯಬದ್ಧವಾಗಿ ನಡೆಸುತ್ತಿರುವ ಚಟುವಟಿಕೆಗಳಲ್ಲಿ ಪೊಲೀಸರು ಹಸ್ತಕ್ಷೇಪ ಮಾಡದಂತೆ ನಿರ್ಬಂಧ ವಿಧಿಸಬೇಕು‘ ಎಂದು ಕೋರಿ, ‘ಸೋಹೊ ಪಬ್ ಮತ್ತು ಗ್ರಿಲ್’ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಲೇವಾರಿ ಮಾಡಿದೆ.

‘ರೆಸ್ಟೋರೆಂಟ್ ಮಾಲೀಕರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಿಂದ ಅಗತ್ಯ ಅನುಮತಿ ಪಡೆದು ಹೊಗೆರಹಿತ ಹುಕ್ಕಾ ಸೇವನೆಗಾಗಿ ನಿರ್ದಿಷ್ಟ ಸ್ಮೋಕಿಂಗ್ ಝೋನ್‌ ಮೀಸಲಿಡಬೇಕು‘ ಎಂದು ಆದೇಶಿಸಿದೆ.

‘ಹುಕ್ಕಾ ಮೂಲಕ ತಂಬಾಕು ಸೇವನೆಗೆ ಅವಕಾಶ ಇರುವುದರಿಂದ ಹುಕ್ಕಾ ಯಂತ್ರಗಳನ್ನು ನಿಷೇಧಿಸಲು ಸಾಧ್ಯವಿಲ್ಲ. ಆದರೆ, ಹುಕ್ಕಾದ ಮೂಲಕ ಬೇರಾವುದೇ ವಸ್ತುಗಳ ಸೇವನೆ
ಯಂತಹ ಅಕ್ರಮ ಉದ್ದೇಶಕ್ಕೆ
ಬಳಕೆ ಮಾಡಿದರೆ ಪೊಲೀ
ಸರು ಮಧ್ಯ ಪ್ರವೇಶಿಸಬಹುದು ಎಂಬ ಅಂಶವನ್ನು ಇದೇ ಹೈಕೋರ್ಟ್ 2015 ಮತ್ತು 2017ರಲ್ಲೇ ನೀಡಿರುವ ತೀರ್ಪುಗಳಲ್ಲಿ ಸ್ಪಷ್ಟ
ಪಡಿಸಿದೆ’ ಎಂಬ ಅಂಶವನ್ನು ನ್ಯಾಯಪೀಠ ತನ್ನ ತೀರ್ಪಿನಲ್ಲಿ
ಉಲ್ಲೇಖ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು