ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಪರಿಸ್ಥಿತಿ ಹಿಂದಿಗಿಂತ ಕೆಟ್ಟಿದೆ: ಹೈಕೋರ್ಟ್‌ ಕಿಡಿ

ಶ್ರಮಿಕ್ ರೈಲು ಸ್ಥಗಿತ: ನಿರ್ಧಾರ ಪುನರ್ ಪರಿಶೀಲಿಸಲು ಹೈಕೋರ್ಟ್‌ ಸಲಹೆ
Last Updated 10 ಜುಲೈ 2020, 8:48 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ಸೋಂಕು ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಎಲ್ಲೆಡೆ ಸಿಬ್ಬಂದಿ ಕಚೇರಿಗೆ ಬರಲು ಹೆದರುವ ಸ್ಥಿತಿ ಉಂಟಾಗುತ್ತಿದೆ.‌ ಅದರಲ್ಲೂ ಬೆಂಗಳೂರಿನ ಪರಿಸ್ಥಿತಿ ಹಿಂದಿಗಿಂತ ಕೆಟ್ಟದಾಗಿದೆ’ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.

ಕೊರೊನಾ ಸಂಕಷ್ಟಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ಡಿ.ರೊಜಾರಿಯೊ, ‘ಶ್ರಮಿಕ್ ರೈಲು’ ಸೇವೆ ಸ್ಥಗಿತಗೊಳಿಸಿರುವ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ನ್ಯಾಯಪೀಠ, ‘ಕಾರ್ಮಿಕರು ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದಾರೆ‌. ಹೀಗಾಗಿ, ಶ್ರಮಿಕ್ ರೈಲು ಸೇವೆ ನಿಲ್ಲಿಸುವ ನಿಲುವು ಮರುಪರಿಶೀಲನೆ ಮಾಡಬೇಕು’ ಎಂದು ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT