ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನಗರದಲ್ಲಿ ಹೋಳಿ...ಬಣ್ಣದೋಕುಳಿ

ಸ್ನೇಹ, ಪ್ರೀತಿಯ ಸಂಕೇತವಾಗಿ ಬಣ್ಣ ಎರಚಿ ಸಂಬಂಧಗಳ ರಂಗು ಹೆಚ್ಚಿಸಿಕೊಂಡ ಯುವಸಮೂಹ
Last Updated 8 ಮಾರ್ಚ್ 2023, 20:57 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧೆಡೆ ಹೋಳಿ ಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳು, ಯುವಜನರು ಸೇರಿದಂತೆ ಎಲ್ಲ ವಯೋ­ಮಾನದವರು ಬೆಳಿಗ್ಗೆಯಿಂದ ಸಂಜೆ ಯವರೆಗೂ ಬಣ್ಣದಲ್ಲಿ ಮಿಂದೆದ್ದರು.

ಯುವಜನರು ರಸ್ತೆ, ಬೀದಿಗಳಲ್ಲಿ ಬಣ್ಣ ಎರಚಿ ಸಂಭ್ರಮಿಸಿದರು. ಶಾಲಾ–ಕಾಲೇಜು, ಹೋಟೆಲ್‌ಗಳು, ಮೈದಾನಗಳಲ್ಲಿಯೂ ಹೋಳಿ ಆಚರಣೆ ನಡೆಯಿತು. ಕೆಲ ಅಪಾರ್ಟ್‌ಮೆಂಟ್ ವಸತಿ ಸಮುಚ್ಚಯ ಹಾಗೂ ಮನೆಗಳಲ್ಲಿ ಪರಸ್ಪರ ಬಣ್ಣ ಹಚ್ಚಿ, ಸಿಹಿ ಸವಿದರು.

ಯುವಕ, ಯುವತಿಯರು, ಮಕ್ಕಳು, ಮಹಿಳೆಯರೆನ್ನದೆ ಪರಸ್ಪರ ಬಣ್ಣದಾಟದಲ್ಲಿ ತೊಡಗಿಸಿಕೊಂಡಿರುವ ದೃಶ್ಯ ಸಾಮಾನ್ಯವಾಗಿತ್ತು. ಚಿಕ್ಕಮಕ್ಕಳು ಪಿಚಕಾರಿಯಿಂದ ದೊಡ್ಡವರಿಗೆ ಬಣ್ಣ ಎರೆಚುತ್ತಿರುವುದು ಸಾಮಾನ್ಯವಾಗಿ ಕಂಡುಬಂತು. ಬಣ್ಣವಾಟವಾಡಿದ ಮನೆ ಮುಂದೆ ವಿವಿಧ ಬಣ್ಣದ ಅಲಂಕಾರ ಕಂಡುಬಂದಿತು. ರಸ್ತೆಗಳಲ್ಲಿ ಬಣ್ಣದ ಕುರುಹು ಕಾಣುತ್ತಿತ್ತು.

ಬಿಸಿಲಿನ ನಡುವೆಯೂ ಮಕ್ಕಳು ಪಿಚಕಾರಿ ಮೂಲಕ ಬಣ್ಣದ ನೀರನ್ನು ಸಿಡಿಸಿ ಸಂಭ್ರಮಿಸಿದರು.‌ ಕೆಲವೆಡೆ ಡಿ.ಜೆ ಸಂಗೀತಕ್ಕೆ ಮೈಮರೆತು ಯುವಜನರು ಕುಣಿದು ಕುಪ್ಪಳಿಸಿದರು. ಚರ್ಚ್‌ ಸ್ಟ್ರೀಟ್‌, ಶೇಷಾದ್ರಿಪುರ, ಕುಮಾರಕೃಪಾ ಮತ್ತು ಶಿವಾನಂದ ವೃತ್ತದಲ್ಲಿ ಯುವಕ–ಯುವತಿಯರು ಬಣ್ಣದಾಟದಲ್ಲಿ ತೊಡಗಿದ್ದರು. ಖಾಸಗಿ ಕಂಪನಿಗಳ ಕಚೇರಿಗಳಲ್ಲಿ ಹೋಳಿ ಸಂಭ್ರಮ ಜೋರಾಗಿತ್ತು.

ನಗರದ ಬಹುತೇಕ ಎಲ್ಲೆಡೆ ಹೋಳಿ ಸಂಭ್ರಮ. ಪಂಚತಾರಾ ಹೊಟೇಲ್‌ಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೋಳಿ ಹಬ್ಬವನ್ನು ಒಂದು ಇವೆಂಟ್‌ ರೀತಿಯಲ್ಲಿ ಆಚರಿಸಿದ ಯುವ ಜನತೆ ಬಣ್ಣದ ಲೋಕದಲ್ಲಿ ಮಿಂದೆದ್ದರು. ವಿವಿಧ ಬಡಾವಣೆಗಳಲ್ಲಿಯೂ ಮತಭೇದ ಮರೆತು ಪರಸ್ಪರ ಬಣ್ಣಗಳ ಹಂಚಿಕೊಂಡು ಅವುಗಳ ಭಾವ ಸವಿದರು. ಸ್ನೇಹ, ಪ್ರೀತಿಯ ಸಂಕೇತವಾಗಿ ಬಣ್ಣಗಳ ಎರಚಿ ಸಂಬಂಧಗಳ ರಂಗು ಹೆಚ್ಚಿಸಿಕೊಂಡರು.

ನಗರದ ಶೇಷಾದ್ರಿಪುರದಲ್ಲಿ ಹೋಳಿ ಆಚರಿಸಿ ಸಂಭ್ರಮಿಸಿದ ಯುವಸಮೂಹ  –ಪ್ರಜಾವಾಣಿ ಚಿತ್ರ
ನಗರದ ಶೇಷಾದ್ರಿಪುರದಲ್ಲಿ ಹೋಳಿ ಆಚರಿಸಿ ಸಂಭ್ರಮಿಸಿದ ಯುವಸಮೂಹ –ಪ್ರಜಾವಾಣಿ ಚಿತ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT