ಭಾನುವಾರ, ಮಾರ್ಚ್ 7, 2021
32 °C

ಉದ್ಯಮಿ ಮಗಳ ಬೆದರಿಸಿ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋರಮಂಗಲ 4ನೇ ಹಂತದಲ್ಲಿರುವ ಮನೆಯೊಂದರಲ್ಲಿ ಉದ್ಯಮಿಯೊಬ್ಬರ ಮಗಳನ್ನು ಬೆದರಿಸಿ ಕಳ್ಳತನ ಮಾಡಲಾಗಿದ್ದು, ಮನೆ ಕೆಲಸದವರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಉದ್ಯಮಿ ಮದನ್‌ ರೆಡ್ಡಿ ಎಂಬುವರ ಮನೆಯಲ್ಲಿದ್ದ ₹ 6 ಲಕ್ಷ ನಗದು ಹಾಗೂ ಚಿನ್ನಾಭರಣ ಕಳವು ಮಾಡಲಾಗಿದೆ. ಮನೆ ಕೆಲಸದವರೇ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹೊಸೂರಿನಲ್ಲಿ ಫಾರ್ಮ್‌ಹೌಸ್ ಹೊಂದಿರುವ ಮದನ್ ರೆಡ್ಡಿ, ಕುಟುಂಬ ಸಮೇತರಾಗಿ ಅಲ್ಲಿಗೆ ಹೋಗಿದ್ದರು. ಮಗಳು ಮಾತ್ರ ಮನೆಯಲ್ಲಿದ್ದಳು. ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳದ ವ್ಯಕ್ತಿಗಳೇ, ಮಗಳನ್ನು ಬೆದರಿಸಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ನಂತರ, ಮಗಳೇ ಪಕ್ಕದ ಮನೆಯವರ ಸಹಾಯದಿಂದ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಚಿನ್ನಾಭರಣದ ಮೌಲ್ಯವೆಷ್ಟು ಎಂಬುದು ಗೊತ್ತಾಗಿಲ್ಲ’ ಎಂದೂ ಮೂಲಗಳು ಹೇಳಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು