ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈಲಿನಲ್ಲಿ ಬಂದು ಮನೆ ಕಳ್ಳತನ: ಮೂವರು ಅಂತರರಾಜ್ಯ ಕಳ್ಳರ ಬಂಧನ

ಹಗಲಿನಲ್ಲಿ ಮಾತ್ರ ಕೃತ್ಯ
Published : 30 ಆಗಸ್ಟ್ 2024, 23:30 IST
Last Updated : 30 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ನಗರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮನೆಗಳ ಬೀಗ ಒಡೆದು ಚಿನ್ನಾಭರಣ ಕಳವು ಮಾಡಿದ್ದ ಮೂವರು ಅಂತರರಾಜ್ಯ ಕಳ್ಳರನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ‌

ಉತ್ತರ ಪ್ರದೇಶದ ಗಾಜಿಯಾಬಾದ್‌ ನಿವಾಸಿಗಳಾದ ಸೋನು ಯಾದವ್, ಅಕ್ಬರ್‌ ಹಾಗೂ ಆತನ ಪತ್ನಿ ಮೊಬಿನಾ ಅವರನ್ನು ಬಂಧಿಸಿ ₹ 30.50 ಲಕ್ಷ ಮೌಲ್ಯದ 405 ಗ್ರಾಂ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಸಂಜಯನಗರ ಠಾಣೆ ವ್ಯಾಪ್ತಿಯ ಎ.ಇ.ಸಿ.ಎಸ್ ಲೇಔಟ್‌ ನಿವಾಸಿಯೊಬ್ಬರು ಮೇ 10ರಂದು ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಗೆ ಮಗಳ ಜತೆ ಹೋಗಿದ್ದರು. ಆ ಸಂದರ್ಭದಲ್ಲಿ ಮನೆಗೆ ಬಂದ ಕೆಲಸದಾಕೆ ಬಾಗಿಲು ತೆರೆದಿರುವುದನ್ನು ಕಂಡು ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸುತ್ತಾರೆ. ಮನೆಗೆ ಬಂದು ನೋಡಿದಾಗ ಕೊಠಡಿಯಲ್ಲಿರುವ ಕಪಾಟುವಿನ ಬೀಗ ಒಡೆದು ಚಿನ್ನಾಭರಣ ಕಳವು ಆಗಿರುವುದು ಗೊತ್ತಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೆಜೆಸ್ಟಿಕ್ ಬಸ್ ನಿಲ್ದಾಣ ಬಳಿ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡ. ಕೃತ್ಯಕ್ಕೆ ಸಹಕರಿಸಿದ ಮತ್ತಿಬ್ಬರು ಆರೋಪಿಗಳನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದಲ್ಲಿ ಬಂಧಿಸಿ, ಉತ್ತರ ಪ್ರದೇಶ ಹಾಗೂ ದೆಹಲಿಯ ಗಿರವಿ ಅಂಗಡಿಯಲ್ಲಿ ಅಡವಿಟ್ಟಿದ ಚಿನ್ನಾಭರಣಗಳನ್ನು ವಶ ಪಡಿಸಿಕೊಳ್ಳಲಾಯಿತು ಎಂದು ಹೇಳಿದರು.

‘ಆರೋಪಿಗಳು ಮಹಾರಾಷ್ಟ್ರ, ದಹೆಲಿ, ಉತ್ತರ ಪ್ರದೇಶ, ಗುಜರಾತ್, ಕರ್ನಾಟಕದಲ್ಲಿ ಮನೆಗಳ ಬೀಗ ಒಡೆದು ಚಿನ್ನಾಭರಣ ಕಳವು ಮಾಡುತ್ತಿದ್ದರು. ಗಾಜಿಯಾಬಾದ್‌ನಿಂದ ರೈಲಿನಲ್ಲಿ ಬರುತ್ತಿದ್ದ ಅಕ್ಬರ್‌ ಮತ್ತು ಸೋನು ಯಾದವ್, ಬೀಗ ಹಾಕಿದ್ದ ಮನೆಗಳನ್ನೇ ಗುರಿಯಾಗಿಸಿಕೊಂಡು ಹಗಲು ವೇಳೆ ಮಾತ್ರ ಕಳ್ಳತನ ಮಾಡುತ್ತಿದ್ದರು. ಕದ್ದ ಆಭರಣಗಳನ್ನು ಮೊಬಿನಾ ಮೂಲಕ ಮಾರಾಟ ಮಾಡಿಸುತ್ತಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಬೆರಳಚ್ಚು ಆಧರಿಸಿ ಆರೋಪಿಗ ಪತ್ತೆಗೆ ದೆಹಲಿಗೆ ತೆರಳಿದೆವು. ಒಂದು ತಿಂಗಳು ಹುಡುಕಾಟ ನಡೆಸಿ ಕೊನೆಗೂ ಅವರನ್ನು ಬಂಧಿಸಲಾಯಿತು’ ಎಂದು ಪ್ರಕರಣದ ಕುರಿತು ಮಾಹಿತಿ ನೀಡಿದರು.

ಅಕ್ಬರ್ 201 ಅಶೋಕನಗರದಲ್ಲಿ ಹಾಗೂ 2020ರಲ್ಲಿ ಯಲಹಂಕ ನ್ಯೂಟೌನ್‌ನಲ್ಲಿ ಕಳ್ಳತನ ಮಾಡಿದ್ದ. ಬಳಿಕ ರಾಜ್ಯದತ್ತ ಸುಳಿದಿರಲಿಲ್ಲ ಎಂದು ಹೇಳಿದರು.

ಸೋನು ಯಾದವ್
ಸೋನು ಯಾದವ್
ಮೊಬಿನಾ
ಮೊಬಿನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT