ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌತುಕ ಮೂಡಿಸುವ ಬಾಹ್ಯಾಕಾಶ ತಂತ್ರಜ್ಞಾನ: ಇಸ್ರೊ ಸಾಧನೆ ಅನಾವರಣ

ಮಾನವ ಅಂತರಿಕ್ಷ ಉಡಾವಣಾ ಪ್ರದರ್ಶನಕ್ಕೆ ಚಾಲನೆ:
Last Updated 21 ಜುಲೈ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ಗಗನಯಾನಿಯಾಗುವ ವಿದ್ಯಾರ್ಥಿಗಳಕನಸುಗಳಿಗೆ ರೆಕ್ಕೆ ಮೂಡಿಸುವಂತಹ ಬಾಹ್ಯಾಕಾಶ ಲೋಕದ ತಂತ್ರಜ್ಞಾನ ಪರಿಚಯಿಸುವ ಪ್ರದರ್ಶನ ಗಮನಸೆಳೆಯಿತು.

ಇಲ್ಲಿನಜವಾಹರಲಾಲ್‌ ನೆಹರೂ ತಾರಾಲಯ ಆವರಣದಲ್ಲಿಗುರುವಾರ ಆರಂಭವಾದ ‘ಮಾನವ ಆಂತರಿಕ್ಷ ಉಡಾವಣಾ ಪ್ರದರ್ಶನ’ದಲ್ಲಿ 75 ವರ್ಷಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿನ ಇಸ್ರೊ ಸಾಧನೆ, ಯೋಜನೆಗಳು ಮತ್ತು ಉಪಗ್ರಹಗಳ ಸಮಗ್ರಮಾಹಿತಿ ನೀಡುವ ಪ್ರಯತ್ನ ಮಾಡಲಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಈ ಪ್ರದರ್ಶನವುಜುಲೈ 24ರವರೆಗೆ ನಡೆಯಲಿದೆ.

ಗಗನಯಾನ ಯೋಜನೆಯ ಮಹತ್ವವನ್ನು ಪ್ರದರ್ಶನದಲ್ಲಿ ವಿವರಿಸಲಾಗಿದೆ.ಮಾನವಸಹಿತ ಬಾಹ್ಯಾಕಾಶ ನೌಕೆಯಲ್ಲಿ ತೆರಳುವ ಇಬ್ಬರು ಅಥವಾ ಮೂವರು ಗಗನಯಾನಿಗಳು 400 ಕಿಲೋ ಮೀಟರ್ ಕಕ್ಷೆಯಲ್ಲಿ 5 ಅಥವಾ 7 ದಿನಗಳ ವಾಸ್ತವ್ಯ ಹೂಡಿದ ಬಳಿಕ, ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ಯೋಜನೆ ಇದಾಗಿದೆ.ಈ ಯೋಜನೆಗೆ ಬಳಸುವ ಮಾದರಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

ಉಪಗ್ರಹಗಳ ಮಾದರಿಗಳ ಪ್ರದರ್ಶನವನ್ನು ಮಾಡಲಾಗಿದೆ. 1990ರಿಂದ ಇಲ್ಲಿಯವರೆಗಿನ ದೂರಸಂವೇದಿ ಉಪಗ್ರಹಗಳು ಮತ್ತು ಅವುಗಳ ಉಪಯೋಗ,ಜಿಸ್ಯಾಟ್‌31, ಜಿಸ್ಯಾಟ್‌–7ಎ ಸೇರಿದಂತೆ ಸಕ್ರಿಯ ಉಪಗ್ರಹಗಳು, ಸಂಪರ್ಕ ಉಪಗ್ರಹಗಳು, ಚಂದ್ರಯಾನ, ಮಂಗಳಯಾನ ಕುರಿತ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಜಾಗತಿಕ ಮಾರುಕಟ್ಟೆ ಬೇಡಿಕೆಯಂತೆ ಸಣ್ಣ ಉಪಗ್ರಹಗಳ ಉಡಾವಣಾ ವಾಹಕಗಳನ್ನು (ಎಸ್‌ಎಸ್‌ಎಲ್‌ವಿ) ಇಸ್ರೊ ಅಭಿವೃದ್ಧಿಪಡಿಸುತ್ತಿದೆ. ಈ ಉಡಾವಣಾ ವಾಹಕಗಳು ಮಿನಿ, ಮೈಕ್ರೊ ಅಥವಾ ನ್ಯಾನೊ ಉಪಗ್ರಹಗಳನ್ನು (10ರಿಂದ 500 ಕೆ.ಜಿ.) 500 ಕಿ.ಮೀ. ಕಕ್ಷೆಯೊಳಗೆ ಸೇರಿಸುವ ಸಾಮರ್ಥ್ಯ ಹೊಂದಿರುವ ವಿವರ ಪ್ರದರ್ಶಿಸಲಾಗಿದೆ. ಜತೆಗೆ, ಬಾಹ್ಯಾಕಾಶ ತಂತ್ರಜ್ಞಾನದಿಂದ ಜನಸಾಮಾನ್ಯರಿಗೆ ಅನುಕೂಲಗಳನ್ನು ವಿವರಿಸುವ ಫಲಕಗಳನ್ನು ಅಳವಡಿಸಲಾಗಿದೆ.

ಶುಕ್ರವಾರ, ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 11ರಿಂದ 3 ಗಂಟೆಯವರೆಗೆ ಬಾಹ್ಯಾಕಾಶ ಕುರಿತು ತಜ್ಞರಿಂದ ವಿಶೇಷ ಉಪನ್ಯಾಸ ಮತ್ತು ಸಮಾಲೋಚನೆ ಹಾಗೂವಿದ್ಯಾರ್ಥಿಗಳಿಗೆ ಪೇಂಟಿಂಗ್‌ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.

‘ಇಸ್ರೊ ಸಾಧನೆಯನ್ನು ಈ ಪ್ರದರ್ಶನದಲ್ಲಿ ಅನಾವರಣಗೊಳಿಸಲಾಗಿದೆ. ಗಗನಯಾನಿಯಾಗಲು ಯಾವ ರೀತಿಯ ಆಸಕ್ತಿಗಳನ್ನು ಬೆಳೆಸಿಕೊಳ್ಳಬೇಕು ಮತ್ತು ಉಪಗ್ರಹಗಳಿಂದಾಗುವ ಅನುಕೂಲ ವಿವರಿಸುವ ಪ್ರಯತ್ನ ಮಾಡಲಾಗಿದೆ’ ಎಂದುಮಾನವ ಆಂತರಿಕ್ಷ ಉಡಾವಣಾ ಕೇಂದ್ರದ ನಿರ್ದೇಶಕ ಡಾ. ಆರ್‌. ಉಮಾಮಹೇಶ್ವರನ್‌ ತಿಳಿಸಿದರು.

‘ಗಗನಯಾನ ಯೋಜನೆಗೆ ಅಂತಿಮ ಹಂತದ ಸಿದ್ಧತೆ’

‘ಇಸ್ರೊದ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಹಲವಾರು ಸವಾಲುಗಳನ್ನು ಮೀರಿ ಯೋಜನೆಯನ್ನು ಯಶಸ್ವಿಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದುಮಾನವ ಅಂತರಿಕ್ಷ ಉಡಾವಣಾ ಕೇಂದ್ರದ (ಎಚ್‌ಎಸ್‌ಎಫ್‌ಸಿ) ನಿರ್ದೇಶಕ ಡಾ. ಆರ್‌. ಉಮಾಮಹೇಶ್ವರನ್‌ ತಿಳಿಸಿದರು.

‘ಈಗಾಗಲೇ ಗಗನಯಾತ್ರಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತಿದೆ. ಗಗನಯಾನದ ವಿನ್ಯಾಸ ಪೂರ್ಣಗೊಳಿಸಲಾಗಿದೆ. ಹಲವು ರೀತಿಯ ಪರೀಕ್ಷೆಗಳನ್ನು ಸಹ ಕೈಗೊಳ್ಳಲಾಗಿದೆ. ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಕಾರ್ಯ ಸುಲಭವಲ್ಲ. ಇಲ್ಲಿ ಪ್ರತಿಯೊಂದು ಅಂಶವೂ ನಿಖರವಾಗಿರಬೇಕು’ ಎಂದು ವಿವರಿಸಿದರು.

ಇಸ್ರೊ ಅಧ್ಯಕ್ಷ ಮತ್ತು ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ ಎಸ್‌. ಸೋಮನಾಥ್‌ ಅವರು, ಕಳೆದ 75 ವರ್ಷಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೊ ಮಾಡಿದ ಸಾಧನೆಯನ್ನು ವಿವರಿಸಿದರು.

‘ಹೊಸ ಆವಿಷ್ಕಾರಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕಾಗಿದೆ. ಇನ್ನು ಮುಂದೆ ಚಂದ್ರಯಾನದಂತಹ ಯೋಜನೆಗಳು ನಿರಂತರವಾಗಿ ನಡೆಯಬಹುದು. ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಯೋಜನೆಯಲ್ಲಿ ಭಾರತ ಯಶಸ್ಸು ಸಾಧಿಸುತ್ತಿದೆ’ ಎಂದರು.

‘ಭಾರತ ಈಗ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿದೆ. ಈಗ ಪರಿಸ್ಥಿತಿ ಬದಲಾಗಿದೆ. ಕೆಲವು ಕೊರತೆಗಳ ನಡುವೆಯೂ ಅಪಾರ ಪ್ರಗತಿ ಸಾಧಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT