ಬೆಂಗಳೂರು: ಮನೆ ಕೆಲಸದಾಕೆಯ ಜತೆಗೆ ಸಲುಗೆಯಿಂದ ಇದ್ದ ಪತಿ ಮೇಲೆ ಮುದ್ದೆ ಮಾಡುವ ಕೋಲಿನಿಂದ ಹಲ್ಲೆ ನಡೆಸಿ, ಕೊಲೆ ಮಾಡಿ ಸುಳ್ಳು ಕಥೆ ಕಟ್ಟಿದ್ದ ಪತ್ನಿಯನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಸ್.ಜಿ. ಪಾಳ್ಯದ ನಿವಾಸಿ ಭಾಸ್ಕರ್ (41) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಶ್ರುತಿ(32)ಯನ್ನು ಪೊಲೀಸರು ಬಂಧಿಸಿದ್ದಾರೆ. ಭಾಸ್ಕರ್ ಅವರ ಚಿಕ್ಕಪ್ಪನ ಪುತ್ರ ಪ್ರಶಾಂತ್ ನೀಡಿದ ದೂರಿನ ಮೇರೆಗೆ ಪ್ರಕರಣದ ತನಿಖೆ ನಡೆಸಲಾಯಿತು ಎಂದು ಪೊಲೀಸರು ಹೇಳಿದರು.

‘ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಭಾಸ್ಕರ್, ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದ. 12 ವರ್ಷಗಳ ಹಿಂದೆ ಶ್ರುತಿಯನ್ನು ಎರಡನೇ ಮದುವೆ ಮಾಡಿಕೊಂಡಿದ್ದ. ಠಾಣಾ ವ್ಯಾಪ್ತಿಯ ಎಸ್.ಜಿ. ಪಾಳ್ಯದಲ್ಲಿ ದಂಪತಿ ನೆಲಸಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮನೆ ಕೆಲಸದಾಕೆಯ ಜೊತೆಗೆ ಭಾಸ್ಕರ್ ಹೆಚ್ಚು ಸಲುಗೆಯಿಂದ ಇರುತ್ತಿದ್ದ. ಈ ವಿಷಯ ಶ್ರುತಿಗೆ ಗೊತ್ತಾಗಿ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಜೂನ್ 27ರ ರಾತ್ರಿ ಭಾಸ್ಕರ್ ಅವರು ಮದ್ಯಪಾನ ಮಾಡಿಕೊಂಡು ಮನೆಗೆ ಬಂದಿದ್ದರು. ಆಗ ಕೆಲಸದಾಕೆಯ ವಿಚಾರ ಪ್ರಸ್ತಾಪವಾಗಿ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ಹೋಗಿ ಸಿಟ್ಟಿಗೆದ್ದ ಶ್ರುತಿ ಮುದ್ದೆ ಮಾಡುವ ಕೋಲಿನಿಂದ ಭಾಸ್ಕರ್ ಮೇಲೆ ಹಲ್ಲೆ ನಡೆಸಿದ್ದಳು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ, ಭಾಸ್ಕರ್ ಮನೆಯಲ್ಲೇ ಮೃತಪಟ್ಟಿದ್ದ’ ಎಂದು ಮೂಲಗಳು ತಿಳಿಸಿವೆ.

‘ಕೃತ್ಯದ ಬಳಿಕ ಆತಂಕಗೊಂಡ ಶ್ರುತಿ ಕೊಲೆ ಪ್ರಕರಣದ ಕುರಿತು ಸುಳ್ಳಿನ ಕಥೆ ಕಟ್ಟಿದ್ದಳು. ಮನೆಗೆ ಬಂದು ಪರಿಶೀಲಿಸಿದ ಪೊಲೀಸರ ಎದುರು ಸುಳ್ಳು ಹೇಳಿದ್ದಳು. ‘ಪತಿ ಭಾಸ್ಕರ್ ಮದ್ಯಪಾನ ಮಾಡಿ ಸ್ನಾನದ ಕೋಣೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಹೀಗಾಗಿ, ಅವರಿಗೆ ಸ್ನಾನ ಮಾಡಿಸಿ ಮಲಗಿಸಿದ್ದೆ. ಮಲಗಿದ್ದ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಹೇಳಿದ್ದಳು. ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಆಗ ಕೊಲೆಯ ರಹಸ್ಯ ಬಯಲಾಗಿದೆ’ ಎಂದು ಪೊಲೀಸರು ಹೇಳಿದರು.

ಕೆಲಸದಾಕೆಗೆ ಬಾಡಿಗೆಯ ಹಣ ನೀಡುತ್ತಿದ್ದ ಭಾಸ್ಕರ್

‘ಭಾಸ್ಕರ್ ಸಿವಿಲ್ ಎಂಜಿನಿಯರ್ ಕೆಲಸ ತೊರೆದು ಮನೆಯಲ್ಲೇ ಹೆಚ್ಚು ಇರುತ್ತಿದ್ದರು. ನಗರದಲ್ಲಿ ಸ್ವಂತ ಮನೆಯನ್ನೂ ಹೊಂದಿದ್ದರು. ಕೆಲವು ಮನೆಗಳನ್ನು ಬಾಡಿಗೆಗೂ ನೀಡಿದ್ದರು. ಅದರಿಂದ ಬರುತ್ತಿದ್ದ ಆದಾಯದಲ್ಲೇ ಜೀವನ ನಿರ್ವಹಣೆ ಮಾಡುತ್ತಿದ್ದರು. ಬಾಡಿಗೆಯಿಂದ ಬಂದ ಹಣವನ್ನು ಭಾಸ್ಕರ್ ಕೆಲಸದಾಕೆಗೆ ನೀಡುತ್ತಿದ್ದ. ಹಣವನ್ನು ಪತ್ನಿಗೆ ನೀಡುತ್ತಿರಲಿಲ್ಲ. ಇದು ಪತ್ನಿಯ ಸಿಟ್ಟಿಗೆ ಕಾರಣವಾಗಿತ್ತು. ಒಂದು ತಿಂಗಳಿನಿಂದ ಮನೆಗೂ ಬಾರದೇ ಹೊರಗೆ ಸುತ್ತಾಟ ನಡೆಸುತ್ತಿದ್ದ. ಜೂನ್ 27ರಂದು ಮನೆಗೆ ಬಂದಾಗ ಗಲಾಟೆ ಆಗಿತ್ತು’ ಎಂದು ಮೂಲಗಳು ತಿಳಿಸಿವೆ.

ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ರಹಸ್ಯ

‘ಭಾಸ್ಕರ್ ಅವರ ಮುಖ ಹಾಗೂ ಇತರೆ ಭಾಗದಲ್ಲಿ ಗಾಯದ ಗುರುತುಗಳು ಇದ್ದವು. ದೇಹಕ್ಕೆ ಯಾವುದೋ ವಸ್ತುವಿನಿಂದ ಹೊಡೆದಿರುವುದು ಪತ್ತೆ ಆಗಿತ್ತು. ಅದನ್ನು ಆಧರಿಸಿ ಶ್ರುತಿಯನ್ನು ವಿಚಾರಣೆಗೆ ಒಳಪಡಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಹಲ್ಲೆಯಿಂದಲೇ ಭಾಸ್ಕರ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಮರಣೋತ್ತರ ಪರೀಕ್ಷಾ ವರದಿ ಸಲ್ಲಿಸಿದ್ದರು. ಮತ್ತೆ ಶ್ರುತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಯಿತು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.