ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಪಡೆಯ ಮೊದಲ ಮಹಿಳಾ ಅಧಿಕಾರಿ ವಿಜಯಲಕ್ಷ್ಮಿ ರಮಣನ್ ನಿಧನ

Last Updated 22 ಅಕ್ಟೋಬರ್ 2020, 1:23 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ವಾಯುಪಡೆಯ (ಐಎಎಫ್) ಮೊದಲ ಮಹಿಳಾ ಅಧಿಕಾರಿ, ನಿವೃತ್ತ ವಿಂಗ್ ಕಮಾಂಡರ್ ವಿಜಯಲಕ್ಷ್ಮಿ ರಮಣನ್ (96) ಅವರು ನಗರದಲ್ಲಿರುವ ತಮ್ಮ ಮಗಳ ನಿವಾಸದಲ್ಲಿ ಭಾನುವಾರ ನಿಧನರಾದರು.

1924ರಲ್ಲಿ ಜನಿಸಿದ್ದ ಅವರು, ತಂದೆಯ ಮರಣದ ನಂತರ 1955ರಲ್ಲಿ ವಾಯುಪಡೆಗೆ ಸೇರಿದ್ದರು. ಸ್ತ್ರೀರೋಗ ತಜ್ಞೆಯಾಗಿ ಸೇನೆಯ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದರು. 1972ರಲ್ಲಿ ವಿಂಗ್ ಕಮಾಂಡರ್ ಹುದ್ದೆಗೆ ಏರಿದ್ದ ಅವರು, 1979ರಲ್ಲಿ ನಿವೃತ್ತರಾಗಿದ್ದರು. ಯುದ್ಧದ ಸಂದರ್ಭದಲ್ಲಿ ಆಡಳಿತಾತ್ಮಕ ಹುದ್ದೆಗಳನ್ನೂ ನಿಭಾಯಿಸಿದ್ದರು. ಅವರಿಗೆ ವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಲಾಗಿತ್ತು. ವಿಜಯಲಕ್ಷ್ಮಿಯವರ ಪತಿ ಕೆ.ವಿ. ರಮಣನ್‌ ಅವರೂ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದರು.

ಅವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT