ಸೋಮವಾರ, ಅಕ್ಟೋಬರ್ 14, 2019
22 °C

ರೈತರು ಕೇಳಿದಂತೆ ಪರಿಹಾರ ಕೊಟ್ಟರೆ, ನಾನೇ ₹ 1ಕೋಟಿ ತೆಗೆದುಕೊಳ್ಳಬೇಕು: ಸವದಿ

Published:
Updated:
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

ಬೆಳಗಾವಿ: ‘ರೈತರು ಹೇಳಿದ ಪ್ರಕಾರ ಪರಿಹಾರ ನೀಡಿದರೆ, ನಾನೇ ₹ 1 ಕೋಟಿ ಪರಿಹಾರ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ನನ್ನ 100 ಎಕರೆ ಬೆಳೆಯೂ ಹಾನಿಯಾಗಿದೆ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ರೈತ ಮುಖಂಡರು ಮನವಿ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಎಕರೆಗೆ ₹ 50 ಸಾವಿರ, ₹ 1 ಲಕ್ಷ ಕೊಡಿ ಎನ್ನುವುದು ರೈತರ ಆಗ್ರಹವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ತೆಗೆದುಬಿಡಿ ಎನ್ನುತ್ತಾರೆ. ಎಲ್ಲರಿಗೂ ಗರಿಷ್ಠ ಪರಿಹಾರ ಕೊಡಿ ಎನ್ನುತ್ತಾರೆ. ಹಾಗೆಲ್ಲ ಮಾಡಲಾಗುವುದಿಲ್ಲ. ಆದರೆ ಕೇಂದ್ರವು ಕೊಡುವ ಬೆಳೆ ಪರಿಹಾರದದೊಂದಿಗೆ ನಾವೂ ಒಂದಷ್ಟು ಸೇರಿಸಿ ಕೊಡಬೇಕು ಎಂಬ ಚಿಂತನೆ ನಡೆಸುತ್ತಿದ್ದೇವೆ. ರೈತ ಮುಖಂಡರಿಗೆ ಸಮಾಧಾನ ಆಗದಿದ್ದರೆ ನಾನೇನು ಮಾಡಲಾಗುವುದಿಲ್ಲ’ ಎಂದು ತಿಳಿಸಿದರು.

‘ಬಳ್ಳಾರಿ, ಬೆಳಗಾವಿ ಸೇರಿದಂತೆ ಯಾವುದೇ ಜಿಲ್ಲೆಗಳ ವಿಭಜನೆ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲ. ಚಿಕ್ಕೋಡಿ, ಅಥಣಿ, ಜಮಖಂಡಿ ಮೊದಲಾದ ಕಡೆಯವರೂ ಪ್ರತ್ತೇಕ ಜಿಲ್ಲೆ ಮಾಡುವಂತೆ ಕೇಳುತ್ತಿದ್ದಾರೆ. ಅಂತಹ ಸಂದರ್ಭ ಬಂದಾಗ ನೋಡೋಣ’ ಎಂದರು.

Post Comments (+)