ಮಂಗಳವಾರ, ಜನವರಿ 28, 2020
24 °C

ಇಗೋ ವಿಜ್ಞಾನ ಬರಹ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಮುನ್ನೋಟ ಟ್ರಸ್ಟ್‌ ವತಿಯಿಂದ ‘ಇಗೋ ವಿಜ್ಞಾನ’ ವಿಶೇಷ ಬರಹ ಸ್ಪರ್ಧೆ ಏರ್ಪಡಿಸಿದೆ.

ವಿಜೇತರಿಗೆ ₹10 ಸಾವಿರ (ಪ್ರಥಮ) ಹಾಗೂ ₹5 ಸಾವಿರ (ದ್ವಿತೀಯ) ನಗದು ಬಹುಮಾನ ನೀಡಲಾಗುವುದು. 

ವಿಷಯಗಳು: ಮೂಲ ವಿಜ್ಞಾನದ ಮುಂದಿನ ದಿನಗಳು, ಸಾರಿಗೆ ವ್ಯವಸ್ಥೆಗಳಲ್ಲಾಗುವ ಬದಲಾವಣೆಗಳು, ಅರಿವಿನ ಜಗತ್ತಿಗೆ ಗಣಿತದ ಕೊಡುಗೆಗಳು, ವೈದ್ಯಕೀಯ ಕ್ಷೇತ್ರದಲ್ಲಾಗುವ ಬದಲಾವಣೆಗಳು, ಸಂಪರ್ಕ ವ್ಯವಸ್ಥೆ ಮುಂದೆ ಹೇಗೆ ಬದಲಾಗಲಿದೆ?, ಬೇಸಾಯದಲ್ಲಿ ಆಗಬೇಕಾದ ಸುಧಾರಣೆಗಳು, ಬಾನಂಗಳದ ಮುಂದಿನ ದಿನಗಳು, ಯಾವ ತಂತ್ರಜ್ಞಾನಗಳು ಕ್ರಾಂತಿ ಹುಟ್ಟಿಸಲಿವೆ?.

ಇವುಗಳಲ್ಲಿ ಒಂದು ವಿಷಯ ಕುರಿತು ಬರಹ ಒಂದು ಸಾವಿರ ಪದಮಿತಿಯಲ್ಲಿರಲಿ. ಆಯ್ದ ಬರಹಗಳನ್ನು arime.org ಪೋರ್ಟಲ್‌ನಲ್ಲಿ ಪ್ರಕಟಿಸಲಾಗುವುದು. ಆಸಕ್ತರು ಬರಹಗಳನ್ನು prashant@munnota.comಗೆ ಫೆಬ್ರುವರಿ 15ರೊಳಗೆ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ.

ಸಂಪರ್ಕ:080 26603000

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು