ಬೆಂಗಳೂರು: ‘ತೋಟಗಾರಿಕೆ ಬೆಳೆಗಳಲ್ಲಿ ಆಕ್ರಮಣಕಾರಿ ಕೀಟಗಳ ಮೇಲೆ ನಿಗಾ ಇಡುವುದರ ಜೊತೆಗೆ ಸಮಗ್ರ ಕೀಟ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಸಂಸ್ಥೆ(ಎನ್‌ಬಿಎಐಆರ್) ನಿರ್ದೇಶಕ ಎಸ್.ಎನ್.ಸುಶೀಲ್, ವಿಜ್ಞಾನಿಗಳಿಗೆ ಸಲಹೆ ನೀಡಿದರು.

ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್), ತೋಟಗಾರಿಕಾ ಪರಿಸರದಲ್ಲಿ ಕೀಟ ನಿರ್ವಹಣೆ ಸುಧಾರಣಾ ಸಂಘದ(ಎಎಪಿಎಂಎಚ್‌ಇ) ಸಹಯೋಗದಲ್ಲಿ ಬುಧವಾರದಿಂದ ಐಐಎಚ್‌ಆರ್ ಆವರಣದಲ್ಲಿ ಆರಂಭವಾದ ಮೂರು ದಿನಗಳ ‘ತೋಟಗಾರಿಕೆಯಲ್ಲಿ ಸಸ್ಯ ಸಂರಕ್ಷಣೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಸುಸ್ಥಿರ ತೋಟಗಾರಿಕೆಯಲ್ಲಿ ಸಸ್ಯ ಸಂರಕ್ಷಣೆಯ ಮಹತ್ವವನ್ನು ವಿವರಿಸಿದ ಅವರು, ಸಮಗ್ರ ಕೀಟ ನಿರ್ವಹಣೆಯ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು.

ತಮಿಳುನಾಡಿನ ತಿರುಚ್ಚಿಯ ಐಸಿಎಆರ್–ಎನ್‌ಸಿಆರ್‌ಬಿ ನಿರ್ದೇಶಕ ಆರ್.ಸೆಲ್ವರಾಜನ್, ‘ಭಾರತದಲ್ಲಿ ತೋಟಗಾರಿಕೆ ಬೆಳೆ ಉತ್ಪಾದನೆ ವಾರ್ಷಿಕ 350 ದಶಲಕ್ಷ ಟನ್‌ಗಳಿಗೆ ತಲುಪಿದೆ. ರೈತರಿಗೆ ಹೆಚ್ಚಿನ ಲಾಭ ದೊರಕಿಸಿಕೊಡಲು ಉತ್ಪನ್ನಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಐಸಿಎಆರ್–ತೋಟಗಾರಿಕೆ ವಿಜ್ಞಾನ ವಿಭಾಗದ ನಿವೃತ್ತ ಡಿಡಿಜಿ ಎನ್.ಕೆ.ಕೃಷ್ಣಕುಮಾರ್, ‘ತೋಟಗಾರಿಕೆ ಪರಿಸರ ವ್ಯವಸ್ಥೆಯನ್ನು ಕೀಟ ಮತ್ತು ರೋಗಗಳಿಂದ ರಕ್ಷಿಸಲು ಸಸ್ಯ ಸಂರಕ್ಷಣಾ ಕ್ಷೇತ್ರದ ವಿಜ್ಞಾನಿಗಳು ಹೊಸ ಆವಿಷ್ಕಾರಗಳೊಂದಿಗೆ, ಇನ್ನಷ್ಟು ಪ್ರಯತ್ನಗಳನ್ನು ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.

ಐಐಎಚ್‌ಆರ್ ನಿರ್ದೇಶಕ ಟಿ.ಕೆ.ಬೆಹರಾ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ವಿ.ಶ್ರೀಧರ್ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.