ಮಂಗಳವಾರ, ಮಾರ್ಚ್ 2, 2021
24 °C

ಮನ್ಸೂರ್‌ ಒಡೆತನದ ಫ್ರಂಟ್‌ ಲೈನ್ ಫಾರ್ಮಸಿ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾವಿರಾರು ಜನರಿಂದ ಕೋಟ್ಯಂತರ ಮೊತ್ತ ಷೇರು ಸಂಗ್ರಹಿಸಿ ವಂಚಿಸಿರುವ ಐಎಂಎ ಸಮೂಹ ಸಂಸ್ಥೆಯ ಮನ್ಸೂರ್‌ ಖಾನ್‌ ಒಡೆತನದಲ್ಲಿರುವ ಫ್ರಂಟ್‌ ಲೈನ್ ಫಾರ್ಮಸಿಯ ಮೂರು ಮಳಿಗೆಗಳ ಮೇಲೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಮಂಗಳವಾರ ಕೂಡಾ ಶೋಧ ಕಾರ್ಯ ಮುಂದುವರಿಸಿದರು.

ಮಲ್ಲೇಶ್ವರದಲ್ಲಿರುವ ಮಳಿಗೆಯಲ್ಲಿ ₹ 2.22 ಲಕ್ಷ ನಗದು ಮತ್ತು ₹ 53 ಲಕ್ಷದ ಔಷಧಿಗಳನ್ನು ಮತ್ತು ವಿದ್ಯುನ್ಮಾನ ಉಪಕರಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಯಶವಂತಪುರ ಮತ್ತು ವಿಜಯನಗರದಲ್ಲಿರುವ ಮಳಿಗೆಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು