ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ನೆಲದಡಿಯಲ್ಲಿನ ವಿದ್ಯುತ್‌ ಪರಿವರ್ತಕ ಉದ್ಘಾಟನೆ ನಾಳೆ

Published 4 ಸೆಪ್ಟೆಂಬರ್ 2023, 16:20 IST
Last Updated 4 ಸೆಪ್ಟೆಂಬರ್ 2023, 16:20 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲೇ ಪ್ರಪ್ರಥಮ ಬಾರಿಗೆ, ಮಲ್ಲೇಶ್ವರದಲ್ಲಿ ನಿರ್ಮಿಸಿರುವ 500 ಕೆವಿಎ ನೆಲದಡಿಯಲ್ಲಿ ವಿದ್ಯುತ್‌ ಪರಿವರ್ತಕ ಕೇಂದ್ರದ ಉದ್ಘಾಟನೆ ಸೆ.5ರಂದು ನಡೆಯಲಿದೆ.

ಬೆಸ್ಕಾಂ ಮತ್ತು ಬಿಬಿಎಂಪಿ ಸಹಭಾಗಿತ್ವದಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗಿದೆ. ಇಂಧನ ಸಚಿವ ಕೆ. ಜೆ. ಜಾರ್ಜ್‌ ಅವರು ಈ ಕೇಂದ್ರವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ನಗರದಲ್ಲಿ ಮೇಲ್ಮಾರ್ಗದ ಎಚ್‌ಟಿ ವಿದ್ಯುತ್‌ ತಂತಿಗಳನ್ನು ಭೂಗತವಾಗಿ ಪರಿವರ್ತಿಸುವ ಯೋಜನೆಯನ್ನು ಬೆಸ್ಕಾಂ ಈಗಾಗಲೇ ಕಾರ್ಯಗತಗೊಳಿಸಿದೆ. ನೆಲದಡಿಯಲ್ಲಿ ಕೇಬಲ್‌ ಹಾಗೂ ವಿದ್ಯುತ್‌ ಪರಿವರ್ತಕ ವ್ಯವಸ್ಥೆಯು ಸುರಕ್ಷತೆ ಹಾಗೂ ಗುಣಮಟ್ಟದ ವಿದ್ಯುತ್‌ ಪೂರೈಕೆಗೆ ಸಹಕಾರಿಯಾಗಲಿದೆ.

ಒಟ್ಟು ₹1.97 ಕೋಟಿ ವೆಚ್ಚದಲ್ಲಿ ಈ  ಪರಿವರ್ತಕ ಕೇಂದ್ರವನ್ನು (ಟಿಸಿ)ಯನ್ನು ನಿರ್ಮಿಸಲಾಗಿದ್ದು. ಈ ಪೈಕಿ ಸಿವಿಲ್‌ ಕಾಮಗಾರಿಗೆ ₹64 ಲಕ್ಷ  ವೆಚ್ಚ ತಗಲಿದ್ದು, ಎಲೆಕ್ಟ್ರಿಕಲ್‌ ಕಾಮಗಾರಿಗೆ ₹1.33 ಕೋಟಿ ವೆಚ್ಚವಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಈ ಕಾಮಗಾರಿ 2022ರ ಮೇ 20ರಂದು ಆರಂಭಗೊಂಡಿತ್ತು. ಸಿವಿಲ್‌ ಕಾಮಗಾರಿಗೆ ಬಿಬಿಎಂಪಿ ಅನುದಾನ ಒದಗಿಸಿತ್ತು.

ಮಲ್ಲೇಶ್ವರದ 15ನೇ ಅಡ್ಡರಸ್ತೆ ಬಳಿ ನಿರ್ಮಿಸಿರುವ ನೆಲದಡಿಯಲ್ಲಿ ಪರಿವರ್ತಕದ ಟ್ರಾನ್ಸ್‌ಫಾರ್ಮರ್‌ ಉದ್ದ 14 ಮೀಟರ್‌, ಅಗಲ 5 ಮೀಟರ್‌ ಹಾಗೂ ಆಳ 4 ಮೀಟರ್‌ಗಳಷ್ಟಿದೆ.

ಲೋಕಾರ್ಪಣೆ ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ಮಲ್ಲೇಶ್ವರದ 15ನೇ ಅಡ್ಡ ರಸ್ತೆಯಲ್ಲಿ ಆಯೋಜಿಸಲಾಗಿದ್ದು, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಸಿ.ಎನ್.‌ ಅಶ್ವಥ್‌ ನಾರಾಯಣ್‌ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT