ಶನಿವಾರ, ಮೇ 15, 2021
25 °C

ಸಾರಿಗೆ ಬಸ್‌ಗಳ ಸಂಖ್ಯೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಾರಿಗೆ ನೌಕರರ ಮೇಲೆ ಸರ್ಕಾರ ಕ್ರಮಕ್ಕೆ ಮುಂದಾಗಿರುವ ನಡುವೆ, ನಗರದಲ್ಲಿ ಸಾರಿಗೆ ನಿಗಮಗಳ ಬಸ್‌ಗಳ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.

ಕೆಎಸ್‌ಆರ್‌ಟಿಸಿಯ 2,651, ಬಿಎಂಟಿಸಿಯ 873, ಎನ್‌ಇಕೆಆರ್ಟಿಸಿಯ 1,150 ಮತ್ತು ಎನ್‌ಡಬ್ಲ್ಯುಆರ್‌ಟಿಸಿಯ 956 ಬಸ್‌ಗಳು ಸೇರಿ ಶುಕ್ರವಾರ ಒಟ್ಟು 5,639 ಬಸ್‌ಗಳು  ಕಾರ್ಯಾಚರಣೆ ಮಾಡಿದವು. ಗುರುವಾರ 4209 ಬಸ್‌ಗಳು ಕಾರ್ಯಾಚರಣೆ ಮಾಡಿದ್ದವು.

ಇದರ ನಡುವೆಯೂ ಖಾಸಗಿ ಬಸ್‌ಗಳ ದರ್ಬಾರ್ ಮುಂದುವರಿದಿದೆ. ಬಸ್‌ಗಳಲ್ಲಿ ದುಪ್ಪಟ್ಟು ದರ ವಸೂಲಿ ಮಾಡುವುದು ಕೂಡ ಮುಂದುವರಿದಿತ್ತು. ಈ ನಡುವೆ ಬಿಎಂಟಿಸಿ ನೌಕರರ ಮೇಲಿನ ಕ್ರಮ ಕೂಡ ತೀವ್ರಗೊಂಡಿದೆ. ಒಟ್ಟಾರೆ 820 ಜನರನ್ನು ಬಿಎಂಟಿಸಿ ವಜಾಗೊಳಿಸಿದೆ. ಇದರಲ್ಲಿ ತರಬೇತಿ, ಪ್ರೊಬೇಷನರಿ ಅವಧಿಯ 580 ಸಿಬ್ಬಂದಿಯೂ ಇದ್ದಾರೆ.  ಶುಕ್ರವಾರ ಇನ್ನೂ 232 ಮಂದಿಯನ್ನು ಅಮಾನತುಗೊಳಿಸಲಾಗಿದ್ದು, ಸದ್ಯ 727 ಮಂದಿ ಅಮಾನತಿನಲ್ಲಿದ್ದಾರೆ ಎಂದು ಬಿಎಂಟಿಸಿ ತಿಳಿಸಿದೆ.

ಕೆಎಸ್‌ಆರ್‌ಟಿಸಿಯಲ್ಲಿ ಈವರೆಗೆ 85 ಮಂದಿ ವಜಾಗೊಂಡಿದ್ದಾರೆ. ಬೇರೆ ಮೂರು ನಿಗಮಗಳಿಗೆ ಹೋಲಿಸಿದರೆ ಬಿಎಂಟಿಸಿಯಲ್ಲೇ ಅತೀ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನೌಕರರ ಕೂಟದಲ್ಲಿ ಬಿಎಂಟಿಸಿ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮುಷ್ಕರವನ್ನು ನೇರವಾಗಿ
ಬೆಂಬಲಿಸುತ್ತಿರುವ ನೌಕರರನ್ನು ಗುರುತಿಸಿ ಪಟ್ಟಿ ಮಾಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನೌಕರರು ದೂರುತ್ತಾರೆ.

‘ಕೆಎಸ್‌ಆರ್‌ಟಿಸಿ ಸೇರಿ ಬೇರೆ ನಿಗಮಗಳಲ್ಲಿ ಗೈರಾದ ನೌಕರರನ್ನು ವರ್ಗಾವಣೆ ಮಾಡಲಾಗುತ್ತಿದೆ. ಬಿಎಂಟಿಸಿಯಲ್ಲಿ ವರ್ಗಾವಣೆ ಮಾಡಿದರೆ ಬೆಂಗಳೂರಿನಲ್ಲೇ ಬೇರೆ ಡಿಪೋ ಸಿಗಲಿದೆ. ಅದಕ್ಕೆ ನೌಕರರು ಹೆದರುವ ಸಾಧ್ಯತೆ ಇಲ್ಲ. ಹೀಗಾಗಿ, ಅಮಾನತು ಮತ್ತು ವಜಾ ರೀತಿಯ ಕ್ರಮಗಳನ್ನು ಅನುಸರಿಸಲಾಗುತ್ತಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು