ಸೋಮವಾರ, ಮಾರ್ಚ್ 27, 2023
21 °C
ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅಭಿಮತ

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಅಗ್ರಗಣ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅನ್ವೇಷಣೆ ಹಾಗೂ ನವೋದ್ಯಮಗಳಿಗೆ ಕೇಂದ್ರ ಸರ್ಕಾರ ನೀಡಿದ ಉತ್ತೇಜನದ ಫಲವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ವಿಶ್ವದ ಪ್ರಮುಖ ಪಾಲುದಾರ ದೇಶವಾಗಿ ಬೆಳೆಯುತ್ತಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್ ಹೇಳಿದರು.

ನಗರದಲ್ಲಿ ಗುರುವಾರ ಟ್ರೂ ಕಾಲರ್‌ನ ಮೊದಲ ವಿಶೇಷ ಕಚೇರಿಯನ್ನು ವರ್ಚುಯಲ್‌ ರೂಪದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿದೆ. ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗೆ ಹಲವು ಕಂಪನಿಗಳೂ ಸಹಕಾರ ನೀಡಲಿವೆ. ಟ್ರೂಕಾಲರ್‌ ಕಂಪನಿಯ ಕಚೇರಿ ರಾಜ್ಯದ ಜನರಿಗೆ ಅವಕಾಶ ಒದಗಿಸಲಿದೆ ಎಂದರು.

ಟ್ರೂಕಾಲರ್‌ ಸಿಇಒ ಅಲಮ್‌ ಮಮೆದಿ, ಭಾರತದ ಬೆಳವಣಿಗೆಯ ಹೆಜ್ಜೆ ಗುರುತುಗಳನ್ನು ನೋಡುವುದೇ ಹೆಮ್ಮೆಯ ಸಂಗತಿ. ಬೆಂಗಳೂರಿನಲ್ಲಿ ಆರಂಭವಾದ ಕಚೇರಿ ಭಾರತದಲ್ಲಿ ಕಂಪನಿಯ ನಿರಂತರ ಹೂಡಿಕೆಯನ್ನು ಖಚಿತಪಡಿಸಿದೆ. ಸುರಕ್ಷತೆ, ಗೌಪ್ಯತೆಯ ಸಿದ್ಧಾಂತಗಳಿಗೆ ಬದ್ಧವಾಗಿ ಭಾರತದ ಡಿಜಿಟಲ್‌ ಸಮಾಜ ಹಾಗೂ ಆರ್ಥಿಕತೆಗೆ ಕಂಪನಿ ಹೆಚ್ಚಿನ ಕೊಡುಗೆ ನೀಡಲಿದೆ ಎಂದು ಭರವಸೆ ನೀಡಿದರು.

ಕೇಂದ್ರ ಸರ್ಕಾರ, ಸಚಿವ ರಾಜೀವ್‌ ಚಂದ್ರಶೇಖರ್ ಅವರು ಡಿಜಿಟಲ್‌ ಕ್ರಾಂತಿಗೆ ಉತ್ತೇಜನ ನೀಡಿದ್ದಾರೆ. ದೇಶದ 33.8 ಕೋಟಿ ಜನರ ಮಧ್ಯೆ ಸುರಕ್ಷಿತ, ಸೂಕ್ತ ಸಂವಾದಕ್ಕೆ ಕಂಪನಿ ಅವಕಾಶ ಕಲ್ಪಿಸಿದೆ. ಅನುಭವಿ ಆಡಳಿತ ಮಂಡಳಿ ಹೊಂದಿರುವುದು ಈ ಸಾಧನೆಗೆ ಕಾರಣ ಎಂದರು.

ಟ್ರೂಕಾಲರ್‌ನ ಭಾರತದ ವ್ಯವಸ್ಥಾಪಕ ನಿರ್ದೇಶಕ ರಿಷಿತ್ ಜುಂಜನ್‌ವಾಲಾ ಉಪಸ್ಥಿತರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು