ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ತುರ್ತಾಗಿ ಗಾಂಧೀಜಿ ಬೇಕು: ನಟ ಮಂಡ್ಯ ರಮೇಶ್‌

ರಂಗ ಚಾವಡಿ ಕಾರ್ಯಕ್ರಮ
Last Updated 11 ಡಿಸೆಂಬರ್ 2021, 4:45 IST
ಅಕ್ಷರ ಗಾತ್ರ

ಬೆಂಗಳೂರು: ‘ಗಾಂಧೀಜಿ ಎನ್ನುವ ವ್ಯಕ್ತಿತ್ವ ಅದ್ಭುತ ರೂಪಕ. ಈ ದೇಶಕ್ಕೆ ತುರ್ತಾಗಿ ಗಾಂಧೀಜಿ ಬೇಕಾಗಿದೆ. ಇಂದಿಗೂ ನನಗೂ ಮಹಾತ್ಮ ಗಾಂಧೀಜಿಯೇ ಮಾದರಿ’ ಎಂದು ರಂಗಕರ್ಮಿ, ನಟ ಮಂಡ್ಯ ರಮೇಶ್‌ ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿ ಆಯೋಜಿಸಿದ್ದ ರಂಗ ಚಾವಡಿ ಕಾರ್ಯಕ್ರಮದಲ್ಲಿ ತಮ್ಮ ಜೀವನದ ಅನುಭವಗಳನ್ನು ಆತ್ಮೀಯವಾಗಿ ಅನಾವರಣಗೊಳಿಸಿದರು.

‘ಗಾಂಧೀಜಿ ಸಹ ಬದಲಾಗಿದ್ದು ಸತ್ಯ ಹರಿಶ್ಚಂದ್ರ ನಾಟಕ ನೋಡಿದ ಮೇಲೆಯೇ. ನಾಟಕ ಪ್ರಬಲವಾದ ಮಾಧ್ಯಮ. ಆದರೆ, ನಾಟಕ, ಸಂಗೀತದಿಂದ ದಿಢೀರ್‌ ಬದಲಾವಣೆಗಳಾಗುವುದಿಲ್ಲ. ಅದು ಎದೆಗೆ ಬಿದ್ದ ಅಕ್ಷರದಂತೆ. ನಿಧಾನವಾಗಿ ಬದಲಾವಣೆಗಳಾಗುತ್ತವೆ’ ಎಂದು ಹೇಳಿದರು.

‘ಎರಡನೇ ತರಗತಿಲ್ಲಿದ್ದಾಗ ಗಾಂಧೀಜಿ ಪಾತ್ರ ಮಾಡಿದ್ದೆ. ಅಂದು ಆರಂಭವಾದ ನನ್ನ ಬಣ್ಣದ ಪಾತ್ರ ಇಂದಿಗೂ ಮುಂದುವರಿದಿದೆ. ಅಂದಿನಿಂದ ಇಂದಿನವರೆಗೂ ಚಪ್ಪಾಳೆಗಳು ಕೇಳಿಸುತ್ತಿವೆ’ ಎಂದು ಅವರು ಹೇಳಿದರು.

‘ನನ್ನ ತಂದೆ ಕ್ಲರ್ಕ್‌ ಆಗಿದ್ದರು. ಪದೇ ಪದೇ ವರ್ಗಾವಣೆಯಾಗುತ್ತಿತ್ತು. ಮಂಡ್ಯದ ಜನರಲ್‌ ಆಸ್ಪತ್ರೆಯ ವಾರ್ಡ್‌ ನಂಬರ್‌ ಆರರಲ್ಲಿ ನಾನು ಜನಿಸಿದೆ.ನಮ್ಮ ತಾಯಿ ತವರು ಮನೆ ನಾಗಮಂಗಲ. ಬೆಳ್ಳೂರಿನಲ್ಲಿ ಸರಿಯಾಗಿ ಓದುವುದಿಲ್ಲ ಎಂದು ಭಾವಿಸಿಕೊಂಡು ಮಂಡ್ಯದಲ್ಲಿ ಕಾನ್ವೆಂಟ್‌ ಶಾಲೆಗೆ ನಮ್ಮ ತಂದೆ–ತಾಯಿ ಸೇರಿಸಿದರು. ನಾನು ಉದ್ಧಾರವಾಗಲಿ ಎನ್ನುವುದು ಅವರ ಬಯಕೆಯಾಗಿತ್ತು’ ಎಂದು ವಿವರಿಸಿದರು.

‘ಎರಡನೇ ತರಗತಿಯಲ್ಲಿದ್ದಾಗ ಆಗಸ್ಟ್‌ 15ರಂದು ಗಾಂಧೀಜಿ ಪಾತ್ರ ಮಾಡಿದ್ದೆ. ತಲೆ ಬೋಳಿಸಿದ್ದರು. ಜಾತ್ರೆಯಲ್ಲಿ ದೊರೆತಿದ್ದ ಕನ್ನಡಕ ಹಾಕಿದ್ದರು. ಲಾರಿಯಲ್ಲಿ ನಮ್ಮನ್ನು ಮಂಡ್ಯದ ಕ್ರೀಡಾಂಗಣಕ್ಕೆ ಕರೆದೊಯ್ದಿದ್ದರು. ಅಂದಿನಿಂದ ನನ್ನ ಬಣ್ಣದ ಪಾತ್ರ ಆರಂಭವಾಯಿತು’ ಎಂದು ನೆನಪಿಸಿಕೊಂಡರು.

‘ಕರ್ನಾಟಕದ ಜನತೆಯಿಂದ ದೊರೆತಿರುವ ಪ್ರೀತಿ ಬಹುದೊಡ್ಡದು. ಆದರೆ, ಕೆಲವು ಸಂದರ್ಭಗಳಲ್ಲಿ ಅವಮಾನವಾದರೂ ಚಪ್ಪಾಳೆಗಳಿಂದ ಸಂತೋಷ ದೊರೆತಿದೆ. ನನಗೆ ತೊಂದರೆ ಕೊಟ್ಟವರು ಸಹ ನಾಟಕದವರು. ಅದಕ್ಕೆ ಹೆಚ್ಚಿಗೆ ಗಮನಹರಿಸಲಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT