ಸೋಮವಾರ, ನವೆಂಬರ್ 30, 2020
20 °C

ಅರಕೆರೆ: ಶಿಲಾಶಾಸನ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ಮೈಸೂರು ರಾಜರಾದ ಇಮ್ಮಡಿ ಕೃಷ್ಣರಾಜ ಒಡೆಯರ್‌ ಅವರ ಆಳ್ವಿಕೆಗೆ ಸಂಬಂಧಿಸಿದ ಶಿಲಾಶಾಸನವೊಂದು ಅರಕೆರೆ ಗ್ರಾಮದ ದೊಡ್ಡಕೆರೆ ಪೂರ್ವದಲ್ಲಿರುವ ಸಿಹಿನೀರಿನ ಬಾವಿಯ ಬಳಿ ಪತ್ತೆಯಾಗಿದೆ.

ಮಣ್ಣಿನಲ್ಲಿ ಅರ್ಧ ಹೂತು ಹೋಗಿದ್ದ ಶಾಸನವನ್ನು ಗ್ರಾಮದ ನಿವಾಸಿಯಾದ ನಾಗರಾಜಗೌಡ, ಇತಿಹಾಸ ತಜ್ಞರಾದ ಕೆ.ಆರ್.ನರಸಿಂಹನ್ ಹಾಗೂ ಕೆ.ಧನಪಾಲ್ ತಂಡವು ಹೊರ ತೆಗೆದು ರಕ್ಷಿಸುವ ಕೆಲಸ ಮಾಡಿದೆ. ಶಿಲಾಶಾಸನದಲ್ಲಿ ಒಟ್ಟು ಹನ್ನೆರಡು ಸಾಲುಗಳಿದ್ದು, 2 ಅಡಿ ಅಗಲ ಮತ್ತು 1.8 ಅಡಿ ಉದ್ದವಿದೆ. ’ಶಿಲಾಶಾಸನದಲ್ಲಿ 1750 ನೇ ಶುಕ್ಲ ಸಂವತ್ಸರದ ಫಾಲ್ಗುಣ ಎನ್ನುವ ಮಾಹಿತಿ ಇದೆ. ಶಿಲಾ ಶಾಸನದ ಕಲ್ಲು ತುಂಡಾಗಿರುವುದರಿಂದ ಮಾಹಿತಿ ಅಪೂರ್ಣವಾಗಿದೆ‘ ಎಂದು ಕೆ.ಆರ್.ನರಸಿಂಹನ್ ಅವರು ಹೇಳಿದರು.

‘ಕಲ್ಲು ಪೂರ್ಣವಾಗಿ ಲಭ್ಯವಾಗಿದ್ದರೆ ಬಹುಶಃ ಗ್ರಾಮದ ಬಗ್ಗೆ ಒಂದಿಷ್ಟು ಮಾಹಿತಿ ದೊರಕುತ್ತಿತ್ತು. 1750ರಲ್ಲಿ ಬಹುಶಃ ಈ ಗ್ರಾಮವು ಒಡೆಯರ್‌ ಆಳ್ವಿಕೆಗೆ ಒಳ ಪಟ್ಟಿರಬೇಕು. ಕಲ್ಲಿನ ತುಂಡಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದೇವೆ‘ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು