ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ಕಾಂ | 10 ಲಕ್ಷಕ್ಕೂ ‌ಅಧಿಕ ಡಿಜಿಟಲ್‌ ಮೀಟರ್‌ ಅಳವಡಿಕೆ

ಶೇ 70ರಷ್ಟು ಪ್ರಗತಿ ಸಾಧನೆ: ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ
Last Updated 16 ಫೆಬ್ರವರಿ 2023, 4:43 IST
ಅಕ್ಷರ ಗಾತ್ರ

ಬೆಂಗಳೂರು: ’ಬೆಸ್ಕಾಂ ಮೆಟ್ರೋಪಾಲಿಟನ್‌ ಪ್ರದೇಶ ವಲಯದಲ್ಲಿ ಫೆ.14ರವರೆಗೆ ಒಟ್ಟು 10.74 ಲಕ್ಷ ಸಿಂಗಲ್‌ ಫೇಸ್‌ ಡಿಜಿಟಲ್‌ ಮೀಟರ್‌ಗಳನ್ನು ಅಳವಡಿಸಲಾಗಿದ್ದು, ಇದುವರೆಗೆ ಶೇ 70ರಷ್ಟು ಪ್ರಗತಿ ಸಾಧಿಸಲಾಗಿದೆ’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

‘ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 58.77ಲಕ್ಷ ಎಲ್‌ಟಿ ವಿದ್ಯುತ್‌ ಮಾಪಕಗಳಿವೆ. ಸಮೀಕ್ಷೆ ಪ್ರಕಾರ ಇವುಗಳಲ್ಲಿ 17.23 ಲಕ್ಷ ಎಲೆಕ್ಟ್ರೊಮೆಕ್ಯಾನಿಕಲ್‌ ಮೀಟರ್‌ಗಳಿವೆ. ಇವುಗಳನ್ನು ಡಿಎಲ್‌ಎಮ್‌ಎಸ್‌ ಸ್ಟ್ಯಾಟಿಕ್‌ (ಡಿವೈಸ್‌ ಲ್ಯಾಂಗ್ವೇಜ್‌ ಮೆಸೇಜ್‌ ಸ್ಪೆಸಿಫಿಕೇಷನ್‌) ಡಿಜಿಟಲ್‌ ಮಾಪಕಗಳನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ 2022ರ ಜುಲೈನಿಂದ ಚಾಲನೆ ನೀಡಲಾಗಿದೆ’ ಎಂದರು.

’ಡಿಎಲ್ಎಮ್ಎಸ್ ಸ್ಟ್ಯಾಟಿಕ್ ಮೀಟರ್ ಗ್ರಾಹಕಸ್ನೇಹಿಯಾಗಿದೆ. ಸಿಂಗಲ್ ಫೇಸ್ ಅಥವಾ ಮೂರು ಫೇಸ್ ಮೀಟರ್ ಅಳವಡಿಸಿಕೊಂಡಿರುವ ಗ್ರಾಹಕರಿಗೆ ವಿದ್ಯುತ್ ವೋಲ್ಟೇಜ್ ಮತ್ತು ವಿದ್ಯುತ್‌ ಸಂಪರ್ಕದ ಲೋಡ್‌ ಮಾಹಿತಿ ಪಡೆಯಬಹುದಾಗಿದೆ. ಈ ಡಿಜಿಟಲ್ ಮೀಟರ್‌ಗಳನ್ನು ಉಚಿತವಾಗಿ ಅಳವಡಿಸಲಾಗುತ್ತಿದ್ದು ಗ್ರಾಹಕರಿಂದ ಶುಲ್ಕ ಪಡೆಯುವುದಿಲ್ಲ’ ಎಂದರು.

’ಗ್ರಾಹಕರು ತಾವು ಬಳಸಿರುವ ವಿದ್ಯುತ್‌ ಪ್ರಮಾಣದ ನಿಖರ ಮಾಹಿತಿ ಪಡೆಯಬಹುದು. ಜತೆಗೆ, ಎರಡು ವರ್ಷಗಳ ಹಿಂದಿನ ಅವಧಿಯವರೆಗೂ ಬಳಸಿದ ವಿದ್ಯುತ್ ಪ್ರಮಾಣದ ವಿವರಗಳನ್ನು ಬೆಸ್ಕಾಂ ಕಚೇರಿಯಿಂದ ಪಡೆದು ವಿದ್ಯುತ್ ಬಿಲ್ ಜೊತೆ ಹೋಲಿಸಬಹದು. ಇದರಿಂದ, ವಿದ್ಯುತ್ ಪ್ರಮಾಣ ಸರಿಯಾಗಿದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಿಕೊಳ್ಳಬಹುದು. ಈ ಹಿಂದಿನ ಮೆಕ್ಯಾನಿಕಲ್‌ ಮೀಟರ್‌ಗಳಲ್ಲಿ ಲೋಡ್‌ ಮತ್ತು ವೊಲ್ಟೇಜ್‌ಗಳನ್ನು ದಾಖಲಿಸುವ ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ ಬೆಸ್ಕಾಂಗೆ ವಿದ್ಯುತ್‌ ಶುಲ್ಕ ಸಂಗ್ರಹದಲ್ಲಿ ನಷ್ಟವಾಗುತ್ತಿತ್ತು’ ಎಂದು ವಿವರಿಸಿದ್ದಾರೆ.

‘ಈಗಿರುವ ಡಿಜಿಟಲ್‌ ಮೀಟರ್‌ಗಳಲ್ಲಿ ಈ ಎಲ್ಲ ಸೌಲಭ್ಯಗಳಿದ್ದು, ಗ್ರಾಹಕರು ಕಡಿಮೆ ಪ್ರಮಾಣದಲ್ಲಿ ವಿದ್ಯುತ್‌ ಬಳಸಿದರೂ ಸಹ ದಾಖಲಾಗುತ್ತದೆ. ಉದಾಹರಣೆಗೆ ಮೊಬೈಲ್‌ ಚಾರ್ಜಿಂಗ್‌, ಝಿರೋ ವ್ಯಾಟ್‌ ಬಲ್ಬ್‌ ಬಳಕೆಯ ವಿದ್ಯುತ್‌ ಪ್ರಮಾಣವನ್ನು ಸಹ ಡಿಜಿಟಲ್‌ ಮೀಟರ್‌ ದಾಖಲಿಸುತ್ತದೆ. ಆದರೆ, ಈ ಸಣ್ಣ ಪ್ರಮಾಣದ ವಿದ್ಯುತ್‌ ಬಳಕೆಯನ್ನು ಮೆಕ್ಯಾನಿಕಲ್‌ ಮೀಟರ್‌ಗಳು ದಾಖಲಿಸುವುದಿಲ್ಲ. ಇದರೊಂದಿಗೆ ಗ್ರಾಹಕರು ನಿಖರವಾಗಿ ಬಳಸುವ ವಿದ್ಯುತ್‌ ಪ್ರಮಾಣವನ್ನು ಮಾತ್ರ ಡಿಜಿಟಲ್‌ ಮೀಟರ್‌ನಲ್ಲಿ ದಾಖಲಿಸಿ ಬಿಲ್ಲಿಂಗ್‌ ಮಾಡಲಾಗುತ್ತದೆ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT