ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

Published 8 ಆಗಸ್ಟ್ 2024, 16:00 IST
Last Updated 8 ಆಗಸ್ಟ್ 2024, 16:00 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಆರ್‌.ವಿ. ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ‘ ಗ್ಲೋಬಲ್ ಕ್ರಿಮಿನಾಲಜಿ ಅಂಡ್‌ ವಿಕ್ಟಿಮಾಲಜಿ (ಐಸಿಜಿಸಿವಿ) 2024’  ನಾಲ್ಕು ದಿನಗಳ ಅಂತರರಾಷ್ಟ್ರೀಯ ಸಮಾವೇಶಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಈಸ್ಟ್ ಲಂಡನ್ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್ ಸೊಸೈಟಿ ಆಫ್ ಕ್ರಿಮಿನಾಲಜಿಯ ಕ್ರಿಟಿಕಲ್ ಕ್ರಿಮಿನಾಲಜಿ ನೆಟ್‌ವರ್ಕ್ ಸಹಯೋಗದಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ಅಪರಾಧ ಮತ್ತು ನ್ಯಾಯ ವ್ಯವಸ್ಥೆಗಳ ವಿವಿಧ ಮುಖಗಳ ಕುರಿತು ಸಂವಾದ ನಡೆಸಲಾಗುತ್ತದೆ. ತಜ್ಞರು ವಿಷಯ ಮಂಡಿಸಲಿದ್ದಾರೆ.

ವಿಷಯ ಪರಿಣತರು, ಶಿಕ್ಷಣ ತಜ್ಞರು, ಸಂಶೋಧಕರು ಭಾಗವಹಿಸುವರು. ಹಲವು ವಿಷಯಗಳ ಕುರಿತು ವಿಚಾರ ಗೋಷ್ಠಿ ಹಾಗೂ ಸಂವಾದ ನಡೆಯಲಿದೆ.

ವಿಶ್ವವಿದ್ಯಾಲಯ ಡೀನ್ ಪ್ರೊ.ವೈ.ಎಸ್.ಆರ್. ಮೂರ್ತಿ, ಸಹಾಯಕ ಪ್ರಾಧ್ಯಾಪಕ ಡಾ.ಭಾನು ಪ್ರಕಾಶ್ ನುನ್ನಾ, ಗುಜರಾತ್‌ನ ಮಾಜಿ ಪೊಲೀಸ್ ಮಹಾನಿರ್ದೇಶಕ ಕೇಶವ್ ಕುಮಾರ್ ಮಾತನಾಡಿದರು.

ಆಗಸ್ಟ್ 10ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸಿಐಡಿ ಮುಖ್ಯಸ್ಥ ಡಾ. ಎಂ.ಎ.ಸಲೀಂ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT