ಬೆಂಗಳೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಧ್ರುವ್ ಮಿತ್ತಲ್, ರೋಹಿತ್ ರಂಜನ್ ಹಾಗೂ ವಿಜಯ್ ಕುಮಾರ್ ಬಂಧಿತರು.

ಆರೋಪಿಗಳಿಂದ ₹85 ಲಕ್ಷ ನಗದು ಹಾಗೂ ಬೆಟ್ಟಿಂಗ್ ಟೋಕನ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಏಪ್ರಿಲ್ 10ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಮಧ್ಯೆ ಪಂದ್ಯ ನಡೆದಿತ್ತು. ಆ ಪಂದ್ಯದ ವೇಳೆ ಆರೋಪಿಗಳು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಪಂಟರ್ಗೆ ಮಾಹಿತಿ ರವಾನೆ: ಆರೋಪಿ ರೋಹಿತ್ ರಂಜನ್ ಏಪ್ರಿಲ್ 10ರಂದು ನಡೆದ ಕ್ರಿಕೆಟ್ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಗ್ಯಾಲರಿಯಲ್ಲೇ ಕುಳಿತು ಪಂಟರ್ಗಳಿಗೆ ಪ್ರತಿ ಬಾಲ್ನ ಮಾಹಿತಿ ನೀಡುತ್ತಿದ್ದ. ಆ ಮಾಹಿತಿ ಆಧರಿಸಿ ಪಂಟರ್ಗಳು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಮೈದಾನದಲ್ಲಿ ಕುಳಿತು ವೀಕ್ಷಿಸುವ ಪಂದ್ಯಕ್ಕೂ ಹಾಗೂ ಅದೇ ಪಂದ್ಯದ ಟಿ.ವಿ ನೇರ ಪ್ರಸಾರಕ್ಕೂ ಕೆಲವು ಸೆಕೆಂಡ್ ಅಂತರ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು ಪ್ರತಿ ಬಾಲ್ನ ಮೇಲೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಫೋರ್, ಸಿಕ್ಸ್, ನೋ ಬಾಲ್, ವೈಡ್ ಎಸೆತದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ಇನ್ನು ಆರೋಪಿ ಧ್ರುವ ಮಿತ್ತಲ್ ಆನ್ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಆತನನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ. ಆತನಿಂದ ಎರಡು ಮೊಬೈಲ್ ಫೋನ್ಗಳು, ಗೇಮಿಂಗ್ ಆ್ಯಪ್ನಲ್ಲಿದ್ದ ಸುಮಾರು ₹63 ಲಕ್ಷ ಮೌಲ್ಯದ ಟೋಕನ್ಗಳು, ಖಾತೆಯಲ್ಲಿದ್ದ ₹13 ನಗದು ಜಪ್ತಿ ಮಾಡಲಾಗಿದೆ. ಜಕ್ಕೂರಿನ ಮನೆಯಲ್ಲಿ ಕುಳಿತು ಆನ್ಲೈನ್ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ವಿಜಯ್ ಕುಮಾರ್ನನ್ನು ಬಂಧಿಸಲಾಗಿದೆ. ಆತನಿಂದ ₹10 ಲಕ್ಷ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.