ಪೀಣ್ಯ ದಾಸರಹಳ್ಳಿ: ‘ನಾವು ಜೀವನದಲ್ಲಿ ಇಷ್ಟಲಿಂಗ ಪೂಜೆ, ಮನೆದೇವರ ಪೂಜೆ, ಗ್ರಾಮ ದೇವತೆ ಪೂಜೆ ಮಾಡುವುದರ ಮೂಲಕ ದೋಷ ನಿವಾರಣೆ ಮಾಡಿಕೊಳ್ಳಬೇಕು’ ಎಂದು 1008 ಜಗದ್ಗುರು ಕಾಶಿ ಜ್ಞಾನ ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ತಿಳಿಸಿದರು.

ದಾಸರಹಳ್ಳಿಯ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ವೇದಿಕೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದಾಸರಹಳ್ಳಿ ಘಟಕ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು. ದಾಸರಹಳ್ಳಿ ಘಟಕ, ಅಕ್ಕಮಹಾದೇವಿ ಮಹಿಳಾ ಸಮಾಜ ದಾಸರಹಳ್ಳಿ ಮತ್ತು ಕಾಯಕಯೋಗಿ ಸಹಕಾರ ಸಂಘದ ವತಿಯಿಂದ ‘ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮ ಜನಜಾಗೃತಿ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇಂದಿನ ಯುವಕರಿಗೆ ಪೂಜೆ, ಪುನಸ್ಕಾರ, ಸಂಸ್ಕೃತಿ, ಸಂಪ್ರದಾಯ ಸನಾತನ ಹಿಂದೂ ಸಂಸ್ಕೃತಿ ಬಗ್ಗೆ ತಿಳಿಸಬೇಕು. ನಮ್ಮ ಸಂಸ್ಕೃತಿಯು ನಿಸರ್ಗಕ್ಕೆ ಹೊಂದಿಕೊಂಡಿದೆ. ಹಾಗಾಗಿ ನಮ್ಮ ಹೊಸ ವರ್ಷ ಯುಗಾದಿಯಾಗಿದೆ. ಆಗ ಪ್ರಕೃತಿಯಲ್ಲಿ ಬದಲಾವಣೆಯಾಗಿ ಹೊಸತನ್ನು ನೀಡುತ್ತದೆ’ ಎಂದರು.

ಮೇಲಣಗವಿ ಮಠದ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿ ಮಾತನಾಡಿ, ‘ಮಕ್ಕಳಲ್ಲಿ ಆಚಾರ, ವಿಚಾರ ಜೊತೆಗೆ ಸಂಸ್ಕೃತಿಯನ್ನು ಕಲಿಸಬೇಕು. ಇಷ್ಟಲಿಂಗ ಪೂಜೆ, ಶಿವನ ಆರಾಧನೆ ಮೈಗೂಡಿಸಿಕೊಳ್ಳಬೇಕು. ಸಮಾಜದ ಒಳಿತಿಗೆ ಕಾಯಕವಾಗಬೇಕು’ ಎಂದು ಹೇಳಿದರು.

ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ವೇದಿಕೆ ದಾಸರಹಳ್ಳಿ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜಣ್ಣ, ಡಿಎಸ್ ಮ್ಯಾಕ್ಸ್ ನಿರ್ದೇಶಕ ದಯಾನಂದ್, ಬಿಎಂಟಿಸಿ ಅಧ್ಯಕ್ಷ ವಿ.ಎಸ್. ಆರಾಧ್ಯ, ಕೆ.ಎಸ್.ಐ.ಐ.ಡಿ.ಸಿ ಅಧ್ಯಕ್ಷ ನಂಜಯ್ಯ ಮಠ್, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಮರಿಸ್ವಾಮಿ, ವೀರಶೈವ ಮುಖಂಡರಾದ ಹರೀಶ್ ಆರಾಧ್ಯ, ಜಿ. ಮನೋಹರ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.