ನೆಲಮಂಗಲ:‘ಪೂರ್ಣಾನಂದಾಪುರಿ ಶ್ರೀಗಳು ಪೂರ್ವಾಶ್ರಮದಲ್ಲಿದ್ದಾಗ(ಬಿ.ಜೆ.ಪುಟ್ಟಸ್ವಾಮಿ) ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಜಾಗ ಮತ್ತು ಅನುದಾನ ಪಡೆದು ಗಾಣಿಗ ಸಮಾಜದ ಏಳಿಗೆಗಾಗಿ ವಿನಿಯೋಗಿಸಿದ್ದರು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಸಮೀಪದ ನಗರೂರಿನ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನಮಠದಲ್ಲಿ ಆಯೋಜಿಸಿದ್ದ ಪೂರ್ಣಾನಂದ ಪುರಿ ಶ್ರೀಗಳ 4ನೇ ಪಟ್ಟಾಭಿಷೇಕ ಮಹೋತ್ಸವದಲ್ಲಿ, ನೂತನ ಜ್ಞಾನಮಂದಿರ ಹಾಗೂ ಟ್ರಸ್ಟ್ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

’ಸಮಾಜವನ್ನು ಸರಿದಾರಿಗೆ ತರುವುದು ಮಠಮಾನ್ಯಗಳಿಗಷ್ಟೆ ಸೀಮಿತವಾಗಿಲ್ಲ, ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ’ ಎಂದರು.

ಕೈಲಾಸಾಶ್ರಮದ ಜಯೇಂದ್ರಪುರಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು ದೊಡ್ಡಬಳ್ಳಾಪುರ ತೊಗಟವೀರ ಕ್ಷತ್ರಿಯ ಮಠದ ದಿವ್ಯಜ್ಞಾನಾನಂದ ಗಿರಿ ಸ್ವಾಮೀಜಿ ಮಾತನಾಡಿದರು. ವನಕಲ್ಲು ಬಸವರಮಾನಂದ ಸ್ವಾಮೀಜಿ, ಬೆಳಗಾವಿ ಮಡಿವಾಳೇಶ್ವರ ಸ್ವಾಮೀಜಿ, ಹೊಸಕೋಟೆ ತಿಗಳ ಮಹಾಸಂಸ್ಥಾನದ ಗೋವರ್ಧನ ನಂದ ಪುರಿ ಶ್ರೀ, ನೆಲಮಂಗಲ ಶಿವಾನಂದಾಶ್ರಮದ ರಮಣಾನಂದ ಸ್ವಾಮೀಜಿ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದ ನಂತರ ಆರೋಗ್ಯ ತಪಾಸಣೆ, ಗಾಣಿಗ ವಧುವರರ ಅನ್ವೇಷಣೆ, ಪ್ರತಿಭಾಪುರಸ್ಕಾರ, ಉದ್ಯೋಗ ಮೇಳ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.