ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'₹35 ಕೋಟಿ ಮೊತ್ತದ ಕಾಮಗಾರಿ ಪ್ರಗತಿಯಲ್ಲಿ'

ಸಮಸ್ಯೆ ಹೇಳಿಕೊಂಡ ಬಸವನಪುರ ವಾರ್ಡ್ ನಿವಾಸಿಗಳು
Last Updated 4 ಜುಲೈ 2020, 21:46 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ನಿಂದಾಗಿ ಉಂಟಾಗಿರುವ ಸಂದಿಗ್ಧ ಸ್ಥಿತಿಯ ನಡುವೆಯೂ ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ಬಸವನಪುರ ವಾರ್ಡ್‌ನ ನಿವಾಸಿಗಳು ಕಾವೇರಿ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆಯ ಲೋಪ, ಹದಗಟ್ಟ ರಸ್ತೆಗಳು... ಹೀಗೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯ ಬಿ.ಎನ್. ಜಯಪ್ರಕಾಶ್ ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿದರು.

‘ಪ್ರಜಾವಾಣಿ’–‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಬಸವನಪುರ ವಾರ್ಡ್‌ನಲ್ಲಿ (ಸಂಖ್ಯೆ 53) ಶನಿವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮ ಇದಕ್ಕೆ ವೇದಿಕೆ ಕಲ್ಪಿಸಿತು. ಸಾರ್ವಜನಿಕ ಸಭೆಯ ಬದಲು ಈ ಬಾರಿ ವಾರ್ಡ್‌ ಮಟ್ಟದಲ್ಲಿ ಫೋನ್‌ ಇನ್‌ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಾಲಿಕೆ ಸದಸ್ಯ ಹಾಗೂ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.

‘ಹ್ಯಾಪಿ ಗಾರ್ಡನ್‌ ಮತ್ತು ವಿಂಡ್ ಫ್ಲವರ್ ಲೇಔಟ್‌ನಲ್ಲಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಖಾಸಗಿ ಟ್ಯಾಂಕರ್‌ಗಳಿಂದ ದುಪ್ಪಟ್ಟು ಹಣ ನೀಡಿ ನೀರು ಖರೀದಿಸಬೇಕಾಗಿದೆ. ಕಾವೇರಿ ಸಂಪರ್ಕ ಒದಗಿಸಿ’ ಎಂದು ಅವಿನಾಶ್ ಮನವಿ ಮಾಡಿದರು.

‘ಕಾವೇರಿ ನೀರು ಪೂರೈಕೆ ಮತ್ತು ಒಳಚರಂಡಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಲಾಕ್ ಡೌನ್ ಕಾರಣ ಕಾಮಗಾರಿ ಎರಡು ತಿಂಗಳು ಸ್ಥಗಿತಗೊಂಡಿತ್ತು. ಒಂದೆರಡು ತಿಂಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಜಯಪ್ರಕಾಶ್ ಉತ್ತರಿಸಿದರು.

ವಾರ್ಡ್‌ನ ಕೆಲವು ಬಡಾವಣೆಯಲ್ಲಿ ಕಾವೇರಿ‌ ನೀರು‌ ಪೂರೈಸಲಾಗುತ್ತಿದೆ. ಆದರೆ, ತುಂಬಾ ನಿಧಾನವಾಗಿ ನೀರು ಬರುತ್ತದೆ. ಒಂದು ಕೊಡ ತುಂಬಲು 15ರಿಂದ 20 ನಿಮಿಷ ಬೇಕಾಗುತ್ತದೆ. ನೀರು ರಭಸವಾಗಿ ಬರುವಂತೆ ವ್ಯವಸ್ಥೆ ಮಾಡಿ ಎಂದು ಹಲವರು ಒತ್ತಾಯಿಸಿದರು.

‘ನೀರು ಪೂರೈಕೆಗೆ ಹೊಸ ಕೊಳವೆ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ತಾಂತ್ರಿಕವಾಗಿಯೂ ಕೆಲವೊಂದು ಬದಲಾವಣೆ ಮಾಡಿಕೊಳ್ಳುತ್ತಿದ್ದೇವೆ. ಕೊಳವೆಗಳ ಸಂಖ್ಯೆ ಸದ್ಯ ಕಡಿಮೆ ಇರುವುದರಿಂದಲೂ ಹೆಚ್ಚಿನ ಒತ್ತಡದಲ್ಲಿ ನೀರು ಪೂರೈಕೆ ಆಗುತ್ತಿಲ್ಲ. ಹೊಸ ಪೈಪ್ ಲೈನ್ ಅಳವಡಿಕೆ ನಂತರ ಸಮಸ್ಯೆ ಸರಿಯಾಗುತ್ತದೆ’ ಎಂದು ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗೌಸ್‌ ಇನಾಂ‌ದಾರ್‌ ಉತ್ತರಿಸಿದರು.

ರಸ್ತೆ ದುರಸ್ತಿ ಮಾಡಿಸಿ: ವಾರ್ಡ್‌ನ ಬಹುತೇಕ ರಸ್ತೆಗಳು ಹದಗೆಟ್ಟಿವೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ದೂಳಿನ ಸಮಸ್ಯೆಯೂ ಹೆಚ್ಚಾಗಿದೆ. ಸಂಚಾರ ದಟ್ಟಣೆಯೂ ವಿಪರೀತವಾಗಿದೆ ಎಂದು ನೀಳಾ, ಸೀಗೆಹಳ್ಳಿ‌ ಮುನಿರಾಜು ಎಂಬುವರು ಹೇಳಿದರು.

‘ನೀರು ಪೂರೈಕೆ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗಾಗಿ ರಸ್ತೆಗಳನ್ನು ಅಗೆದಿರುವುದರಿಂದ ಸಮಸ್ಯೆಯಾಗಿದೆ. ಈ ಕಾಮಗಾರಿ‌‌ ಮುಗಿದ‌ ಕೂಡಲೇ ರಸ್ತೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಜಲಮಂಡಳಿಯ ಕಾಮಗಾರಿ ಮುಗಿದಿರುವ ಬಡಾವಣೆಗಳಲ್ಲಿ ರಸ್ತೆಗಳನ್ನು ದುರಸ್ತಿ ಮಾಡಿ, ಡಾಂಬರು ಹಾಕಲಾಗಿದೆ’ ಎಂದು ಜಯಪ್ರಕಾಶ್ ತಿಳಿಸಿದರು.

‘ರಸ್ತೆ, ಉದ್ಯಾನ ಅಭಿವೃದ್ಧಿ ಸೇರಿದಂತೆ ವಾರ್ಡ್ ವ್ಯಾಪ್ತಿಯಲ್ಲಿ ಸದ್ಯ ₹35 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ.‌ ನಗರಾಭಿವೃದ್ಧಿ ಸಚಿವರಾಗಿರುವ ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್ ಅವರು ವಾರ್ಡ್ ಅಭಿವೃದ್ಧಿಗೆ ಯಥೇಚ್ಛ ಅನುದಾನ ಕೊಡಿಸುತ್ತಿದ್ದಾರೆ. ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಬಸವನಪುರವನ್ನು ಮಾದರಿ ವಾರ್ಡ್ ಆಗಿ ಅಭಿವೃದ್ಧಿಗೊಳಿಸಲಾಗುವುದು’ ಎಂದರು.

ಕಸದ ಸಮಸ್ಯೆ:‘ವಾರ್ಡ್‌ನಲ್ಲಿ ಎಲ್ಲೆಲ್ಲಿ ಖಾಲಿ ಜಾಗ ಇರುವಲ್ಲಿ ಕಸ ಸುರಿಯಲಾಗುತ್ತಿದೆ. ಈ ಸ್ಥಳಗಳು ಹಾವು ಮತ್ತು ಸೊಳ್ಳೆಗಳ ಆವಾಸ ಸ್ಥಾನಗಳಾಗಿವೆ. ಸ್ವಚ್ಛತೆಯ ಕಡೆಗೆ ಗಮನ ಹರಿಸಿ' ಎಂದು ಕೆ.ಆರ್.ಮಂಜುನಾಥ್ ಎಂಬುವರು ಕೋರಿದರು.

'ಜನ ಎಲ್ಲೆಂದರಲ್ಲಿ ಕಸ ಸುರಿಯುವುದರ ಮೇಲೆ ನಿಗಾ ಇಡಲು ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನುಳಿದ ಕೆಲವು ಜಾಗಗಳಲ್ಲಿಯೂ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಕಸ ಸುರಿಯುವವರಿಗೆ ದಂಡವನ್ನೂ ವಿಧಿಸಲಾಗುತ್ತಿದೆ' ಎಂದು ಕಾರ್ಪೊರೇಟರ್ ಉತ್ತರಿಸಿದರು.

ಸಂಚಾರ ದಟ್ಟಣೆ ಸಮಸ್ಯೆ, ಆಟದ ಮೈದಾನದ ಕೊರತೆ ಬಗ್ಗೆಯೂ ಕೆಲವರು ಗಮನ ಸೆಳೆದರು. ಜಯಪ್ರಕಾಶ್ ಅವರು ಹಲವು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಕೆಲವರು ಪ್ರಶಂಸಿಸಿದರು. ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಿದ್ದನ್ನು ಸ್ಮರಿಸಿದರು.

ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ವಿಜಯ್, ನಾಗಪ್ಪ, ರಘು, ಆರೋಗ್ಯ ನಿರೀಕ್ಷಕರಾದ ರಾಘವೇಂದ್ರ, ಗುರುರಾಜ್, ಜಲಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಚಲಪತಿ, ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ‌ ಎಂಜಿನಿಯರ್ ಗೀತಾ ಅವರು ಓದುಗರ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಖಾಲಿ ಜಾಗ ಇರುವಲ್ಲಿ ಬೀಳುತ್ತಿದೆ ಕಸ
‘ವಾರ್ಡ್‌ನಲ್ಲಿ ಎಲ್ಲೆಲ್ಲಿ ಖಾಲಿ ಜಾಗ ಇರುವಲ್ಲಿ ಕಸ ಸುರಿಯಲಾಗುತ್ತಿದೆ. ಈ ಸ್ಥಳಗಳು ಹಾವು ಮತ್ತು ಸೊಳ್ಳೆಗಳ ಆವಾಸ ಸ್ಥಾನಗಳಾಗಿವೆ. ಸ್ವಚ್ಛತೆಯ ಕಡೆಗೆ ಗಮನ ಹರಿಸಿ' ಎಂದು ಕೆ.ಆರ್.ಮಂಜುನಾಥ್ ಎಂಬುವರು ಕೋರಿದರು.

'ಜನ ಎಲ್ಲೆಂದರಲ್ಲಿ ಕಸ ಸುರಿಯುವುದರ ಮೇಲೆ ನಿಗಾ ಇಡಲು ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನುಳಿದ ಕೆಲವು ಜಾಗಗಳಲ್ಲಿಯೂ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಕಸ ಸುರಿಯುವವರಿಗೆ ದಂಡವನ್ನೂ ವಿಧಿಸಲಾಗುತ್ತಿದೆ' ಎಂದು ಕಾರ್ಪೊರೇಟರ್ ಉತ್ತರಿಸಿದರು.

ಸಂಚಾರ ದಟ್ಟಣೆ ಸಮಸ್ಯೆ, ಆಟದ ಮೈದಾನದ ಕೊರತೆ ಬಗ್ಗೆಯೂ ಕೆಲವರು ಗಮನ ಸೆಳೆದರು. ಜಯಪ್ರಕಾಶ್ ಅವರು ಹಲವು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಕೆಲವರು ಪ್ರಶಂಸಿಸಿದರು. ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಿದ್ದನ್ನು ಸ್ಮರಿಸಿದರು.

ಕಳ್ಳರ ಹಾವಳಿ
'ಐದು ತಿಂಗಳ ಹಿಂದೆ ಮನೆಯಲ್ಲಿ ಕಳ್ಳತನವಾಗಿತ್ತು. ಪೊಲೀಸರು ಸರಿಯಾಗಿ ತನಿಖೆ ನಡೆಸಲಿಲ್ಲ. ವಾರ್ಡ್ ನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಜನರ ಮೇಲೆ ಕೆಲವು ಕಳ್ಳರು ಹಲ್ಲೆಯನ್ನೂ ಮಾಡಿದ್ದಾರೆ' ಎಂದು ಎನ್. ವೇಣು ಹಾಗೂ ಇತರರು ಗಮನಕ್ಕೆ ತಂದರು.

'ವೈಟ್ ಸಿಟಿಯಲ್ಲಿ ನಡೆದ ಕಳವು ಪ್ರಕರಣದಲ್ಲಿ ಪಾಲ್ಗೊಂಡವರನ್ನು ಬಂಧಿಸಲಾಗಿದೆ. ಹೊಯ್ಸಳ, ಚೀತಾ ವಾಹನಗಳ ಮೂಲಕ ನಿಯಮಿತ ಗಸ್ತು ನಡೆಸುತ್ತಿದ್ದೇವೆ. ಈ ಪ್ರಕಣದ ಬಗ್ಗೆ ಲಿಖಿತವಾಗಿ ದೂರು ನೀಡಿ. ಇಂತಹ ಆತಂಕ ಎದುರಾದಾಗ ಸಹಾಯವಾಣಿಗೆ (100) ಕರೆ ಮಾಡಿದರೆ, ಎರಡು‌ ಮೂರು‌ ನಿಮಿಷದೊಳಗೆ ಪೊಲೀಸರು ಸ್ಥಳಕ್ಕೆ ಬರುತ್ತಾರೆ' ಎಂದು ಸರ್ಕಲ್ ಇನ್‌ಸ್ಪೆಕ್ಟರ್‌ ಅಂಬರೀಷ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT