ಬೆಂಗಳೂರು: ನಗರದ ಜನತಾ ಸೇವಾ ಕೋ–ಆಪರೇಟಿವ್ ಬ್ಯಾಂಕ್ 2024–25ನೇ ಸಾಲಿನಲ್ಲಿ ₹19.49 ಕೋಟಿ ಲಾಭ ಗಳಿಸಿದ್ದು, ನಿವ್ವಳ ಅನುತ್ಪಾದಕ ಸಾಲ(ಎನ್ಪಿಎ) ಶೂನ್ಯವಾಗಿದೆ.

ನಗರದಲ್ಲಿ ಐದು ಶಾಖೆಗಳನ್ನು ಹೊಂದಿರುವ ಬ್ಯಾಂಕ್ನಲ್ಲಿ ಒಟ್ಟು 13961 ಷೇರುದಾರರಿದ್ದಾರೆ. ₹36.68 ಕೋಟಿಗಿಂತ ಹೆಚ್ಚು ಷೇರು ಬಂಡವಾಳವಿದೆ. ಷೇರುದಾರರಿಗೆ ಕಡಿಮೆ ಬಡ್ಡಿದರದಲ್ಲಿ ವಿವಿಧ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು, ₹ 726.20 ಕೋಟಿಗಳಷ್ಟು ಸಾಲ ಮತ್ತು ಮುಂಗಡಗಳನ್ನು ನೀಡಿದೆ.

ಸುಮಾರು 40 ಸಾವಿರ ಗ್ರಾಹಕರಿದ್ದಾರೆ. ಎಲ್ಲ ಗ್ರಾಹಕರಿಗೂ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಗ್ರಾಹಕರಿಗೆ ಠೇವಣಿಗಳ ಮೇಲೆ ಆಕರ್ಷಕ ಬಡ್ಡಿ ದರ ನೀಡುತ್ತಿದ್ದು, ₹1237.90 ಠೇವಣಿ ಸಂಗ್ರಹಣೆಯಾಗಿದೆ.

ಬ್ಯಾಂಕಿನಲ್ಲಿ ₹ 213.94 ಕೋಟಿಗೂ ಹೆಚ್ಚು ಅಪದ್ಧನ ಮತ್ತು ಇತರೆ ನಿಧಿಗಳಿವೆ. ಬ್ಯಾಂಕ್, ಷೇರು ಸಂಗ್ರಹ, ಸ್ವಂತ ನಿಧಿ ಕ್ರೋಢೀಕರಣ, ಠೇವಣಿ ಸಂಗ್ರಹಣೆ, ಸಾಲ ನೀಡಿಕೆ ಮತ್ತು ಲಾಭ ಗಳಿಕೆಯಲ್ಲಿ ರಾಜ್ಯದ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಪೈಕಿ ಮುಂದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಹೆಚ್.ಸಿ. ಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.