ಗುರುವಾರ , ಏಪ್ರಿಲ್ 2, 2020
19 °C

ಪ್ರಶಾಂತ್‌ ನೆರವಿಗೆ ಜೆಡಿಎಸ್‌ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಚುನಾವಣಾ ತಂತ್ರಗಾರಿಕೆ ನಿಪುಣ ಪ್ರಶಾಂತ್‌ ಕಿಶೋರ್ ಜತೆಗೆ ಮಾತುಕತೆ ನಡೆಸಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಪ್ರಶಾಂತ್‌ ಜತೆಗೆ ಮೊದಲ ಸುತ್ತಿನ ಮಾತುಕತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸರ್ಕಾರ ಟೇಕ್ ಆಫ್ ಆಗಿಲ್ಲದಿರುವ ಕುರಿತು ಪ್ರಸ್ತಾಪಿಸಿ, ಮಾತಾಡುವಂತಹ ಕೆಲಸಗಳನ್ನು ಈ ಸರ್ಕಾರ ಮಾಡಿಯೇ ಇಲ್ಲ. ಇನ್ನು ಆರು ತಿಂಗಳ
ಸಮಯ ಕೊಡಿ ಅಂತ ಮುಖ್ಯಮಂತ್ರಿ  ಯಡಿಯೂರಪ್ಪ ಕೇಳಿದ್ದಾರೆ. ಆರು ತಿಂಗಳು ಆದ ಮೇಲೆ ಜನ ಬಡಿಗೆ ತಗೊಂಡು ವಿಪಕ್ಷಕ್ಕೆ ಹೊಡೆಯುತ್ತಾರೆ ಅಂತ ಸಿಎಂ ಹೇಳಿದ್ದಾರೆ. ಆರು ತಿಂಗಳು ಸಮಯ ಕೊಟ್ಟೇ ನೋಡ್ತೀವಿ, ಅದೇನು ಸಾಧನೆ ಮಾಡ್ತಾರೋ ಮಾಡಲಿ’ ಎಂದರು.

ಪ್ರಧಾನಿಗೆ ಆಹ್ವಾನ: ನಿಖಿಲ್‌ ಮದುವೆ ಸಿದ್ಧತೆ ನಡೆದಿದೆ.  ಏಪ್ರಿಲ್ 17ರಂದು ಮದುವೆ ನಡೆಯಲಿದೆ. ಲಗ್ನ ಪತ್ರಿಕೆ ಹಂಚುವುದಕ್ಕೆ ಇನ್ನೂ ಆರಂಭಿಸಿಲ್ಲ ಎಂದು ಹೇಳಿದ ಅವರು, ಪ್ರಧಾನಿ ನರೇಂದ್ರ ಮೋದಿ ಸಹಿತ ಎಲ್ಲ ಗಣ್ಯರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು