ಮಂಗಳವಾರ, ಮಾರ್ಚ್ 28, 2023
33 °C

ಜೆಎನ್‌ಸಿಎಎಸ್‌ಆರ್‌ಗೆ ವಸ್ತು ವಿಜ್ಞಾನದಲ್ಲಿ 28ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಸ್ತು ವಿಜ್ಞಾನ ಕ್ಷೇತ್ರದಲ್ಲಿ ನೇಚರ್‌ ಸೂಚ್ಯಂಕದ ವಿಶ್ವದ 50 ಪ್ರತಿಷ್ಠಿತ ಸಂಸ್ಥೆಗಳ ಪಟ್ಟಿಯಲ್ಲಿ ಬೆಂಗಳೂರಿನ ಜವಾಹರಲಾಲ್‌ ನೆಹರೂ ಮುಂದುವರಿದ ವೈಜ್ಞಾನಿಕ ಸಂಶೋಧನಾ ಕೇಂದ್ರ (ಜೆಎನ್‌ಸಿಎಎಸ್‌ಆರ್‌) ಸ್ಥಾನ ಪಡೆದಿದೆ.

ಈ ಪಟ್ಟಿಯಲ್ಲಿ ಜೆಎನ್‌ಸಿಎಎಸ್‌ಆರ್‌ 28 ನೇ ಸ್ಥಾನ ಪಡೆದಿದೆ. ಇದರಲ್ಲಿ ಚೀನಾದ 18, ಅಮೆರಿಕಾದ 12, ಯುಕೆ 2 ವಿಶ್ವವಿದ್ಯಾಲಯ/ಸಂಸ್ಥೆಗಳು ಸ್ಥಾನ ಪಡೆದಿವೆ. ವಿಶ್ವದ ಶ್ರೇಷ್ಠ ದರ್ಜೆಯ 50 ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳ ಪಟ್ಟಿ ಇದಾಗಿದೆ.

ಈ ಪಟ್ಟಿಯಲ್ಲಿ ಜೆಎನ್‌ಸಿಎಎಸ್‌ಆರ್‌ ಭಾರತದ ಏಕೈಕ ಸಂಸ್ಥೆ ಸ್ಥಾನ ಗಿಟ್ಟಿಸಿದೆ. ಚೀನಾದ ಶಾಂಘೈನ ಜಿಯಾ ತಾಂಘ್ ವಿಶ್ವವಿದ್ಯಾಲಯ ಮೊದಲ ಸ್ಥಾನ ಪಡೆದಿದೆ. ಅಮೆರಿಕಾದ ಟೆಕ್ಸಾಸ್‌ನ ಆಸ್ಟಿನ್‌ ವಿಶ್ವವಿದ್ಯಾಲಯ ನಾಲ್ಕನೇ, ಬರ್ಕ್‌ಲಿ ವಿಶ್ವವಿದ್ಯಾಲಯ 12, ಕೇಂಬ್ರಿಜ್‌ ವಿಶ್ವವಿದ್ಯಾಲಯ 27 ನೇ ಸ್ಥಾನ ಪಡೆದಿದೆ.

ಜೆಎನ್‌ಸಿಎಎಸ್‌ಆರ್‌ ಅಧ್ಯಕ್ಷ ಪ್ರೊ.ಗಿರಿಧರ್‌ ಯು ಕುಲಕರ್ಣಿ ಈ ಕುರಿತು ಪ್ರತಿಕ್ರಿಯಿಸಿ, ಸಂಸ್ಥೆಯ ವಸ್ತು ವಿಜ್ಞಾನ ವಿಭಾಗ 28 ನೇ ಸ್ಥಾನ ಪಡೆದಿರುವ ಬಗ್ಗೆ ಹೆಮ್ಮೆ ಇದೆ. ನಮ್ಮ ಸಂಶೋಧನಾ ಸಾಮರ್ಥ್ಯವನ್ನು ಈ ಮಟ್ಟಕ್ಕೆ ಬೆಳೆಸುವಲ್ಲಿ ದಶಕಗಳ ಶ್ರಮವಿದೆ. ಈ ಸಣ್ಣ ಕೇಂದ್ರದಲ್ಲಿ ವಸ್ತು ವಿಜ್ಞಾನ ಅಲ್ಲದೆ, ಘನಸ್ಥಿತಿಯ ರಾಸಾಯನ ವಿಜ್ಞಾನ, ನ್ಯಾನೋಟೆಕ್ನಾಲಜಿ, ಥರ್ಮೋ ಎಲೆಕ್ಟ್ರಿಕ್‌, ಸೂಪರ್‌ ಕಂಡಕ್ಟವಿಟಿ ವಿಷಯಗಳಲ್ಲಿ ಮುಂದುವರಿದ ಸಂಶೋಧನೆಗಳು ನಡೆಯುತ್ತಾ ಬಂದಿದೆ ಎಂದರು.

2019 ರಲ್ಲಿ ನೇಚರ್‌ ಇಂಡೆಕ್ಸ್‌ನ ಯಂಗ್‌ ಗ್ರಾಜುಯೇಟ್‌ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ  ಜೆಎನ್‌ಸಿಎಎಸ್‌ಆರ್‌ 7ನೇ ಸ್ಥಾನ ಪಡೆದಿತ್ತು. ಅಲ್ಲದೆ, ರಾಸಾಯನ ವಿಜ್ಞಾನ ಕ್ಷೇತ್ರದ 50 ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ 17 ನೇ ರ್‍ಯಾಂಕ್‌ ಕೂಡಾ ಪಡೆದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು