ಪುಸ್ತಕ ಸಂತೆಯ ಮಳಿಗೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ವೀರಕಪುತ್ರ ಶ್ರೀನಿವಾಸ್ ಬೊಳುವಾರು ಮೊಹಮ್ಮದ್ ಕುಂಞಿ ಚರ್ಚೆ ನಡೆಸಿದರು. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಇದ್ದರು.
-ಪ್ರಜಾವಾಣಿ ಚಿತ್ರ
₹4 ಕೋಟಿ ವಹಿವಾಟು ನಿರೀಕ್ಷೆ
ಮೂರನೇ ಆವೃತ್ತಿಯ ಪುಸ್ತಕ ಸಂತೆಗೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ. ವಿಶೇಷವಾಗಿ ಶಾಲಾ-ಕಾಲೇಜು ಮಕ್ಕಳು ಸಂತೆಗೆ ಭೇಟಿ ನೀಡಿ ಪುಸ್ತಕ ಖರೀದಿಸಿರುವುದು ಸಂತೋಷ ಉಂಟು ಮಾಡಿದೆ. ಕಳೆದ ವರ್ಷ ₹3 ಕೋಟಿ ವಹಿವಾಟು ಆಗಿತ್ತು. ಈ ವರ್ಷ ಅಂದಾಜು ₹4 ಕೋಟಿ ವಹಿವಾಟು ನಿರೀಕ್ಷೆ ಮಾಡಲಾಗಿದೆ. ಶನಿವಾರ ಮತ್ತು ಭಾನುವಾರ ಹೆಚ್ಚು ಜನರು ಭೇಟಿ ನೀಡಲಿದ್ದಾರೆ ಎಂದು ವೀರಕಪುತ್ರ ಶ್ರೀನಿವಾಸ ಹೇಳಿದರು.