ಶುಕ್ರವಾರ, ನವೆಂಬರ್ 27, 2020
25 °C

ಕನ್ನಡ ಬೆಳೆಯಲು ‘ಓಬಮಾ’ ಬರಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ‘ಎಸ್.ಪಿ.ಬಾಲಸುಬ್ರಹ್ಮಣ್ಯಂ ಪದಗಳಿಗೆ ಜೀವಭಾವ ತುಂಬಿ ಹಾಡುವ ಪ್ರತಿಭಾವಂತ ಗಾಯಕರಾಗಿದ್ದರು. ಅದಕ್ಕೆ ನಾವೆಲ್ಲ ಅವರನ್ನು ಎಸ್.ಪಿ. ಭಾವ ಶುಭ್ರಮಣ್ಯಂ ಎಂದು ಕರೆಯುತ್ತಿದ್ದೆವು’ ಎಂದು ಸಾಹಿತಿ ವೈ.ವಿ.ಗುಂಡೂರಾವ್ ನೆನಪಿಸಿಕೊಂಡರು.

ಹೆಸರಘಟ್ಟ ಗ್ರಾಮದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ‘ಕನ್ನಡ ಕಂಪು’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

‘ಅಮೆರಿಕದ ಯಾವ ಅಧ್ಯಕ್ಷರು ಬಂದರೂ ಕನ್ನಡ ಉದ್ಧಾರವಾಗಲ್ಲ. ‘ಓಬಮಾ’ ಬಂದರೆ ಮಾತ್ರ ಕನ್ನಡ ಬೆಳೆಯುತ್ತದೆ. ಅಂದರೆ, ಕನ್ನಡವನ್ನು ಓದುವುದು, ಬರೆಯುವುದು, ಮಾತನಾಡುವುದು ಮಾಡಿದರೆ ಕನ್ನಡ ಬೆಳೆಯುತ್ತದೆ. ಹಾಗಾಗಿ ಓಬಮಾ ಬರಬೇಕು’ ಎಂದು ನಗೆಚಟಾಕಿ ಹಾರಿಸಿದರು.

ಸಂಸ್ಥೆಯ ನಿರ್ದೇಶಕ ಎಂ.ಆರ್. ದಿನೇಶ್ ಮಾತನಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.