ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುಸ್ತಕ ಖರೀದಿ ಸಂಖ್ಯೆ ಹೆಚ್ಚಿಸಬೇಕು’

Last Updated 25 ಜುಲೈ 2019, 19:06 IST
ಅಕ್ಷರ ಗಾತ್ರ

ಬೆಂಗಳೂರು:‌ ‘ಪ್ರಕಾಶನಗಳಿಂದ ಗ್ರಂಥಾಲಯಗಳು ಖರೀದಿ ಮಾಡುವ ಪುಸ್ತಕಗಳಸಂಖ್ಯೆಯನ್ನು 300ರಿಂದ 500ಕ್ಕೆ ಹೆಚ್ಚಿಸಬೇಕು’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರ ಗುರುವಾರ ಆಯೋಜಿಸಿದ್ದ ‘ಮುದ್ರಣದ ವಿವಿಧ ಆಯಾಮಗಳು ಒಂದು ಚರ್ಚೆ’ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

‘ತಮಿಳುನಾಡು ಮತ್ತು ಕೇರಳದಲ್ಲಿ ಗ್ರಂಥಾಲಯಗಳಿಗಾಗಿ 1 ಸಾವಿರ ಪುಸ್ತಕಗಳ ಖರೀದಿ ನಡೆಯುತ್ತಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ಕನಿಷ್ಠ 500 ಅಥವಾ ₹3 ಲಕ್ಷ ಮೊತ್ತದ ಪುಸ್ತಕ ಖರೀದಿ ಮಾಡಬೇಕು’ ಎಂದು ಒತ್ತಾಯಿಸಿದರು.

ಸಾಹಿತಿ ಪ್ರೊ.ಎಂ.ಎಚ್. ಕೃಷ್ಣಯ್ಯ, 'ಪುಸ್ತಕಗಳ ಮುದ್ರಣ ಅಚ್ಚು ಮೊಳೆಯಿಂದ ಡಿಜಿಟಲ್ ತನಕ ಬೆಳೆದಿದೆ. ನಾವು ಮಾತನಾಡಿದ್ದನ್ನು ಅಕ್ಷರವಾಗಿ ಪರಿವರ್ತಿಸುವ ಆ್ಯಪ್‌ಗಳು ಕೂಡ ಇವೆ. ತಂತ್ರಜ್ಞಾನ ಮುಂದುವರಿದಂತೆ ಕರಡು ತಿದ್ದುವಂತಹ ಆ್ಯಪ್‌ಗಳನ್ನೂ ಅಭಿವೃದ್ಧಿಪಡಿಸುವುದು ಸೂಕ್ತ’ ಎಂದರು.

ಕರ್ನಾಟಕ ಬರಹಗಾರರು ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ‘ಗ್ರಂಥಾಲಯಗಳನ್ನು ಬಿಬಿಎಂಪಿ ಸುಪರ್ದಿಗೆ ನೀಡುವ ಪ್ರಸ್ತಾವ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಮುಂದಿದೆ. ಅದಕ್ಕೆ ಒಪ್ಪಿಗೆ ನೀಡದಂತೆ ಒತ್ತಡ ಹೇರಬೇಕಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ನೇತೃತ್ವ ವಹಿಸಿ ಹೋರಾಟ ನಡೆಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT