ಬುಧವಾರ, ಮಾರ್ಚ್ 29, 2023
23 °C

ಕವಿ ಲಕ್ಷ್ಮಣರಾವ್ ಅವರಿಗೆ ‘ಕನ್ನಡ ಸಾಹಿತ್ಯ ಪ್ರಣತಿ’ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕವಿ ಬಿ.ಆರ್.ಲಕ್ಷ್ಮಣರಾವ್ ಅವರನ್ನು ‘ಕನ್ನಡ ಸಾಹಿತ್ಯ ಪ್ರಣತಿ’ ಪ್ರಶಸ್ತಿ ಹಾಗೂ ಗಾಯಕ ಗರ್ತಿಕೆರೆ ರಾಘಣ್ಣ (ಹೋ.ನಾ.ರಾಘವೇಂದ್ರ ಗರ್ತಿಕೆರೆ) ಅವರನ್ನು ‘ಕನ್ನಡ ಸಾಹಿತ್ಯ ಪ್ರಚಾರ ಪ್ರಣತಿ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಜ. 21ರಂದು ಸಂಜೆ  ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ಬಯಲು ರಂಗಮಂದಿರದಲ್ಲಿ ನಡೆಯುವ  ಪ್ರಣತಿ ಪ್ರತಿಷ್ಠಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 

ಕವಿ ಡುಂಡಿರಾಜ್‌, ವಿದ್ವಾಂಸ ಡಾ.ರಾಮಸ್ವಾಮಿ ಅಯ್ಯಂಗಾರ್‌ ಇರಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಣತಿ ರಾಘವೇಂದ್ರ ರಾವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು