ಶನಿವಾರ, ಜೂನ್ 19, 2021
22 °C

ಎಚ್‌ಡಿಕೆಯಿಂದ ಕಾಂಗ್ರೆಸ್‌ಗೆ ಮೋಸ: ಶೋಭಾ ಕರಂದ್ಲಾಜೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜರಾಜೇಶ್ವರಿನಗರ: ‘ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್‌ನ ಕೆಲವರನ್ನು ನೆಪಮಾತ್ರಕ್ಕೆ ಸಚಿವರಾಗಿ ಮಾಡಿದ್ದರು. ಕೆಲಸ ಮಾಡಲು ಬಿಡದ ಕಾರಣ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಬೆಂಬಲಿಸಿದ್ದಾರೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಉಲ್ಲಾಳು ವಾರ್ಡ್‌ನ ನಾಗದೇವನಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಸೋಮಶೇಖರ್ ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿದರು.

ಅವರು, ಬಿಜೆಪಿಗೆ ಬಂದ ಮೇಲೆ ನಮ್ಮ ಕುಟುಂಬದ ಸದಸ್ಯರಂತೆ’ ಎಂದರು. ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್, ಮೈತ್ರಿ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಿ ಎಂದು ಮನವಿ ಮಾಡಿದರೂ ಕವಡೆ ಕಾಸಿನ ಬೆಲೆ ಸಿಗುತ್ತಿರಲಿಲ್ಲ’ ಎಂದರು.

ಬಿಜೆಪಿ ಮುಖಂಡ ಅಶ್ವತ್ಥ್ ನಾರಾಯಣ, ಪಾಲಿಕೆ ಸದಸ್ಯರಾದ ಶಾರದಾ ಮುನಿರಾಜು, ಆರ್ಯಶ್ರೀನಿವಾಸ್, ಸತ್ಯನಾರಾಯಣ, ರಾಜಣ್ಣ, ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಿ.ಎಂ.ಮಾರೇಗೌಡ, ಮುಖಂಡರಾದ ಎ.ಶಿವಕುಮಾರ್, ಪಂಚಲಿಂಗಯ್ಯ, ಪುರಸಭೆ ಮಾಜಿ ಉಪಾಧ್ಯಕ್ಷ ಜಿ.ಮುನಿರಾಜು, ಮೈಲಸಂದ್ರ ಮುನಿರಾಜು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪುಷ್ಪಲತಾ ಪರಮಶಿವಯ್ಯ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು