ಮಂಗಳವಾರ, ಜನವರಿ 28, 2020
22 °C

ಕೆಐಎ: ನಿಷ್ಕ್ರಿಯ ವಿಮಾನ ತೆರವಿಗೆ ಉಪಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನದಲ್ಲಿ ಕೆಟ್ಟು ನಿಲ್ಲುವ ಹಾಗೂ ನಿಷ್ಕ್ರಿಯಗೊಳ್ಳುವ ವಿಮಾನಗಳನ್ನು ತ್ವರಿತವಾಗಿ ತೆರವುಗೊಳಿಸಲು ಹೊಸದೊಂದು ಉಪಕರಣ ಬಳಸಲು ಆಡಳಿತ ಮಂಡಳಿ ಮುಂದಾಗಿದೆ.

ಈ ಸಂಬಂಧ ನಿಲ್ದಾಣದ ಆಡಳಿತ ಮಂಡಳಿ ಕುಂಜ್ ಜಿಎಂಬಿಎಚ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ, ಕೋಡ್‌ ಎಫ್‌ ವರ್ಗದವರೆಗೆ ನಿಷ್ಕ್ರಿಯಗೊಂಡ ವಿಮಾನಗಳನ್ನು ತೆರವು ಮಾಡುವ ದೇಶದ ಮೊದಲ ವಿಮಾನ ನಿಲ್ದಾಣ ಇದಾಗಲಿದೆ.

‘ರನ್‌ವೇಗಳಲ್ಲಿ ಅಪಘಾತ ಹಾಗೂ ಇತರೆ ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಣೆ ನಡೆಸಲು ಉಪಕರಣ ನೆರವಾಗಲಿದೆ. ಜೊತೆಗೆ, ಉಪಕರಣದ ತರಬೇತಿ ಕೇಂದ್ರವನ್ನೂ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ನಿಲ್ದಾಣದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಹಾಫ್ ಅಂಡರ್‌ಸನ್‌ ಹೇಳಿದರು.   

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು