ಬೆಂಗಳೂರು: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ಏಪ್ರಿಲ್ನಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ 1,80,745 ಕೆ.ಜಿ ದಾಳಿಂಬೆ ಹಣ್ಣುಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡಿದೆ.

ದಾಳಿಂಬೆ ಹಣ್ಣಿನ ರಫ್ತಿನಲ್ಲಿ ಕೆಐಎ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ರಾಜ್ಯದಿಂದ ರಫ್ತು ಮಾಡಲಾಗುತ್ತಿರುವ ದಾಳಿಂಬೆ ಹಣ್ಣಿನಲ್ಲಿ ಶೇ 99 ರಷ್ಟು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಮೂಲಕವೇ ನಡೆಯುತ್ತಿದೆ ಎಂದು ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಪ್ರಾಧಿಕಾರವು ತಿಳಿಸಿದೆ. ಜಾಗತಿಕ ಸರಕು ಸಾಗಣೆ ವಿಮಾನ ಸಂಸ್ಥೆಗಳಾದ ಏರ್ ಫ್ರಾನ್ಸ್, ಬ್ರಿಟಿಷ್ ಏರ್ವೇಸ್, ಕ್ಯಾಥೆ ಪೆಸಿಫಿಕ್, ಎಮಿರೇಟ್ಸ್ ಏರ್ಲೈನ್ಸ್, ಎತಿಹಾದ್ ಏರ್ವೇಸ್, ಕೆಎಲ್ಎಂ ರಾಯಲ್ ಡಚ್ ಏರ್ಲೈನ್ಸ್, ಕತಾರ್ ಏರ್ವೇಸ್, ಸಿಂಗಾಪುರ ಏರ್ಲೈನ್ಸ್ ಮತ್ತು ಟರ್ಕಿ ಏರ್ಲೈನ್ಸ್ ಮೂಲಕ 12 ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಹಣ್ಣುಗಳನ್ನು ಪೂರೈಕೆ ಮಾಡಲಾಗುತ್ತಿದೆ.

ವಿಮಾನ ನಿಲ್ದಾಣದಲ್ಲಿ ಹಣ್ಣುಗಳು ಹಾಳಾಗದಂತೆ ಶೇಖರಿಸಿಡಲು ಶೀತಲೀಕರಣ ಘಟಕವಿದೆ.ಕೂಲ್ಪೋರ್ಟ್ ಎಂಬ ತಂಪುಗೊಳಿಸುವ ಪ್ರದೇಶದಲ್ಲಿ 40 ಸಾವಿರ ಟನ್ಗಳಷ್ಟು ಹಣ್ಣು ಹಾಗೂ ವಿವಿಧ ಉತ್ಪನ್ನಗಳನ್ನು ಸಂಗ್ರಹಿಸಿಡಬಹುದು. ಅಗತ್ಯ ತಾಪಮಾನ ನಿಯಂತ್ರಣ ವ್ಯವಸ್ಥೆ ಕೂಡ ಇದೆ.ಇದರಿಂದ ತಾಜಾ ಹಣ್ಣುಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿದೆ. ಆದ್ಯತೆಯ ಮೇರೆ ಹಣ್ಣುಗಳನ್ನು ರಫ್ತು ಮಾಡಲಾಗುತ್ತಿದೆ ಎಂದು ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್) ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.