ಮಂಗಳವಾರ, ಮಾರ್ಚ್ 2, 2021
18 °C
ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸರಕು ದಟ್ಟಣೆ ಹೊಂದಿರುವ ವಿಮಾನ ನಿಲ್ದಾಣ

ಕೆಐಎ: ಗರಿಷ್ಠ ಪ್ರಮಾಣದ ಸರಕು ಸಾಗಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) 2020ರ ಡಿಸೆಂಬರ್‌ನಲ್ಲಿ ಗರಿಷ್ಠ ಪ್ರಮಾಣದ ಸರಕು ಸಾಗಣೆ ನಡೆದಿದೆ. ಈ ಮೂಲಕ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸರಕುಗಳನ್ನು ಸಾಗಿಸಿದ ವಿಮಾನ ನಿಲ್ದಾಣ ಎಂಬ ಹಿರಿಮೆಗೆ ಕೆಐಎ ಪಾತ್ರವಾಗಿದೆ.

ಈ ಅವಧಿಯಲ್ಲಿ ಒಟ್ಟಾರೆ 33,053 ಟನ್‌ಗಳಷ್ಟು ಸರಕು ಸಾಗಣೆಯಾಗಿದ್ದು, ವಾರ್ಷಿಕ ಶೇ. 7ರಷ್ಟು ಪ್ರಗತಿ ಸಾಧಿಸಿದೆ. ಬೇರೆ ಕಡೆಯಿಂದ ಇಲ್ಲಿಗೆ ಬಂದಿರುವ ಮತ್ತು ಸಾಗಣೆಯಾಗಿರುವ ಸರಕು ಕೂಡ ಇದರಲ್ಲಿ ಸೇರಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಕಳೆದ ನಾಲ್ಕು ತಿಂಗಳು (ಸೆಪ್ಟೆಂಬರ್-ಡಿಸೆಂಬರ್) ಸರಕು ಸಾಗಣೆಯಲ್ಲಿ ಶೇಕಡ 100ರಷ್ಟು ಗುರಿ ಸಾಧಿಸಿರುವ ಏಕೈಕ ವಿಮಾನ ನಿಲ್ದಾಣವೂ ಇದಾಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆ (ಬಿಐಎಎಲ್‌) 30,961 ಟನ್ ಸರಕು ಸಾಗಿಸಿತ್ತು. ಇ-ವಾಣಿಜ್ಯ, ಬಹುಬೇಗ ಹಾಳಾಗುವ ಸರಕುಗಳು, ಸ್ವದೇಶಿ ಮತ್ತು ವಿದೇಶಿ ಉತ್ಪನ್ನಗಳೂ ಇದರಲ್ಲಿ ಇವೆ. 21 ತಿಂಗಳಲ್ಲಿ ಅತ್ಯಧಿಕ (20,288 ಟನ್) ವಿದೇಶಿ ಸರಕು ಸಾಗಣೆ ಡಿಸೆಂಬರ್‌ನಲ್ಲಿ ಸಾಧ್ಯವಾಗಿದೆ ಎಂದು ಬಿಐಎಎಲ್‌ ಹೇಳಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು