ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರಮಂಗಲ ಕಣಿವೆ ರಾಜಕಾಲುವೆ ಟೆಂಡರ್‌ಗೆ ಅನುಮೋದನೆ

ಸಚಿವ ಸಂಪುಟದಲ್ಲಿ ತೀರ್ಮಾನ
Last Updated 17 ಮಾರ್ಚ್ 2021, 21:03 IST
ಅಕ್ಷರ ಗಾತ್ರ

ಬೆಂಗಳೂರು: ಕೋರಮಂಗಲ ಕಣಿವೆ ರಾಜಕಾಲುವೆಯನ್ನು ನಿರ್ಮಿಸುವ (ಸಿಟಿಜನ್‌ ವಾಟರ್ ವೇ ಪ್ರಾಜೆಕ್ಟ್‌) ಕಾಮಗಾರಿಯ ಟೆಂಡರ್‌ಗೆ ಸಚಿವ ಸಂಪುಟ ಸಭೆ ಘಟನೋತ್ತರ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಈ ಯೋಜನೆಯಡಿ ಕೆ.ಆರ್‌.ಮಾರುಕಟ್ಟೆಯಿಂದ ಬೆಳ್ಳಂದೂರುವರೆಗೆ ರಾಜಕಾಲುವೆಯನ್ನು ನಿರ್ಮಿಸಲಾಗುವುದು. ಯೋಜನಾ ಅಂದಾಜು ವೆಚ್ಚ ₹169 ಕೋಟಿಗಳು.

ನಾಲೆ ನಿರ್ಮಾಣ ಯೋಜನೆಯು ವಿನ್ಯಾಸ, ಎಸ್‌ಟಿಪಿ ನಿರ್ಮಾಣ, ಹಾಲಿ ಇರುವ ಒಳಚರಂಡಿಯ ಜಾಲದ ದುರಸ್ಥಿ, ಪರಿಶೀಲನೆ, ಮಾರ್ಗದ ಮರು ವಿನ್ಯಾಸ, ಎಲ್ಲ ಒಳಚರಂಡಿಗಳನ್ನು ಈ ರಾಜಕಾಲುವೆಗೆ ತಿರುಗಿಸುವುದನ್ನು ಒಳಗೊಂಡಿದೆ. ಐದು ವರ್ಷಗಳ ಅವಧಿಯಲ್ಲಿ ನಿರ್ಮಾಣ, ಕಾರ್ಯಾಚರಣೆ ಮತ್ತು ವರ್ಗಾವಣೆ(ಬಿಒಟಿ) ಆಧಾರದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು.

ವೆಂಕಟರಮಣೇಗೌಡ (ಸ್ಟಾರ್‌ ಇನ್‌ಫ್ರಾಟೆಕ್‌) ಎಂಬುವರು ₹179.50 ಕೋಟಿಗೆ, ಶ್ರೀನಿವಾಸರಾವ್‌ (ಬಿಎಸ್‌ಆರ್‌ ಇನ್‌ಫ್ರಾಟೆಕ್‌ ಇಂಡಿಯಾ ಲಿಮಿಟೆಡ್‌) ಎಂಬುವರು ₹186.03 ಕೋಟಿಗೆ ಬಿಡ್‌ ಸಲ್ಲಿಸಿದ್ದಾರೆ. ವೆಂಕಟರಮಣೇಗೌಡ ಅವರ ಟೆಂಡರ್‌ ಅನುಮೋದನೆ ನೀಡಿದ್ದು, ಅದರ ಸ್ಥಿರೀಕರಣಕ್ಕೆ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಇಡಲಾಯಿತು. ಇದಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಮಿಷನ್‌ 2022 ರಡಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಕಾಮಗಾರಿಯನ್ನು ನಿಗದಿ ಅವಧಿಯಲ್ಲಿ ಪೂರ್ಣಗೊಳಿಸಲು ಮುಂಗಾರಿಗೆ ಮೊದಲೇ ಆರಂಭಿಸಬೇಕು. ಇದಕ್ಕೆ ಆಡಳಿತಾತ್ಮಕ ಅನುಮೋದನೆ ಕಳೆದ ಡಿಸೆಂಬರ್‌ನಲ್ಲೇ ನೀಡಲಾಗಿದೆ.

ಈ ಯೋಜನೆಯ ಅನುಷ್ಠಾನದಿಂದ ಮಳೆ ನೀರುಗಾಲುವೆಗಳನ್ನು ಮಾಲಿನ್ಯದಿಂದ ರಕ್ಷಿಸಬಹುದು. ನಗರದ ನಾಗರೀಕರಿಗೆ ಉತ್ತಮ ವಿಹಾರ ಸ್ಥಳಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಅಂತರ್ಜಲ ಮಾಲಿನ್ಯವನ್ನೂ ತಪ್ಪಿಸಬಹುದು ಎಂದು ಸಭೆಯಲ್ಲಿ ವಿವರಿಸಲಾಯಿತು.ಈ ಯೋಜನೆಗೆ ಈಗಾಗಲೇ ₹169 ಕೋಟಿ ಅನುದಾನ ಒದಗಿಸಲಾಗಿದೆ. ಹೆಚ್ಚುವರಿ ಮೊತ್ತವನ್ನು ಬಿಬಿಎಂಪಿ ಸ್ವಂತ ನಿಧಿಯಿಂದ ಭರಿಸಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT