ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಲ್‌ | ಕ್ರಿಕೆಟ್‌ಗಿಂತ ಬೆಟ್ಟಿಂಗ್‌ನಲ್ಲೇ ಹೆಚ್ಚು ದುಡ್ಡು: ಭಾಸ್ಕರ್‌ ರಾವ್‌

Last Updated 20 ನವೆಂಬರ್ 2019, 6:33 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ತಂಡಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ತಂಡಗಳ ಮಾಲೀಕರು ಕ್ರಿಕೆಟ್‌ಗಿಂತ ಬೆಟ್ಟಿಂಗ್‌ನಲ್ಲೇ ಹೆಚ್ಚು ದುಡ್ಡು ಮಾಡಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಬುಧವಾರ ಮಾತನಾಡಿದ ಅವರು, ‘ಬುಕ್ಕಿಗಳು ಆಟಗಾರರನ್ನು ವಿದೇಶ ಪ್ರವಾಸ ಕಳುಹಿಸುವುದು,ಹನಿಟ್ರಾಪ್‌ನಲ್ಲಿ ಸಿಲುಕಿಸಿ ಅವರನ್ನುಕಟ್ಟಿ ಹಾಕಲಾಗುತ್ತದೆ’ ಎಂದರು.

‘ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಕೆಲವು ಹಿರಿಯ ಕ್ರಿಕೆಟಿಗರು ನಮಗೆ ಹೇಳಿದ್ದಾರೆ. ಇಷ್ಟು ದಿನ ಏನು ಮಾಡುತ್ತಿದ್ದಿರಿ ಎಂದು ಕೆಎಸ್‌ಸಿಎಗೆ ನಾವು ನೋಟಿಸ್ ಕೊಟ್ಟಿದ್ದೇವೆ. ಆಟಗಾರರು ಎಲ್ಲಿಂದ ಬಂದರು, ಯಾರು ಸೆಲೆಕ್ಷನ್ ಮಾಡಿದರು ಎಂಬ ಮಾಹಿತಿಯನ್ನೂ ಕೇಳಿದ್ದೇವೆ. ಐಪಿಎಲ್ ವರೆಗೂ ತನಿಖೆ ಹೋಗಬಹುದು. ಬಿಸಿಸಿಐ ಕೂಡ ಸಂಪರ್ಕಿಸಿ ಮಾಹಿತಿ ಕೇಳಿದೆ’ ಎಂದರು.

‘ಪ್ರಕರಣದಲ್ಲಿ ಈಗಾಗಲೇ ಏಳು ಜನರ ಬಂದನ ಆಗಿದೆ. ಸಿಸಿಬಿ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ’ ಎಂದೂ ಅವರು ವಿವರಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT