ಅಡುಗೆ ಅನಿಲ ಸೋರಿಕೆಯಿಂದಲೇ ಈ ಅನಾಹುತ ಆಗಿದೆಯೇ ಅಥವಾ ಬೇರೆ ಏನಾದರೂ ಕಾರಣವಿದೆಯೇ ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕು. ಗಟ್ಟಿ ಮುಟ್ಟಾದ ಆರ್‌ಸಿಸಿ ಮನೆ ಸಂಪೂರ್ಣ ಹಾನಿಗೆ ಒಳಗಾಗಿದೆ. ಸಿಲಿಂಡರ್‌ನಿಂದ ಅಡುಗೆ ಅನಿಲ ಸೋರಿಕೆಯಾಗಿ ಸ್ಫೋಟವಾಗಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಾನಿಯಾಗಲು ಸಾಧ್ಯವೇ? ಈ ಘಟನೆ ಸಂಬಂಧ ಸೂಕ್ತ ರೀತಿಯಲ್ಲಿ ತನಿಖೆ ಆಗಬೇಕು. ಮೃತರಿಗೆ ಸರ್ಕಾರ ಪರಿಹಾರ ಕೊಡಬೇಕು
ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಕಾರಣ ಗೊತ್ತಾಗಲಿ
ಅನುಮಾನ ನಿವಾರಣೆಗೆ ಸರಿಯಾದ ತನಿಖೆ ಆಗಬೇಕು. ಶೇಖರಿಸಿದ್ದ ಸ್ಫೋಟಕ ಸ್ಫೋಟ ಆಗಿದೆಯೇ ಅನ್ನೋದು ಗೊತ್ತಾಗಬೇಕು. ಮೃತ ಅಕ್ಕಯ್ಯಮ್ಮ ಕುಟುಂಬಕ್ಕೆ ವೈಯಕ್ತಿಕವಾಗಿ ಒಂದು ಲಕ್ಷ ಪರಿಹಾರ ನೀಡುತ್ತೇನೆ.